-->
ದುಡ್ಡಿನಾಸೆಗೆ ಮಗು ಕೊಟ್ಟಳು... ಮಗು ಖರೀದಿಸಿದ್ದಾಕೆಯೇ ದರೋಡೆಕೋರರಿಂದ ಹಣ ಎಗರಿಸಿದಳು?

ದುಡ್ಡಿನಾಸೆಗೆ ಮಗು ಕೊಟ್ಟಳು... ಮಗು ಖರೀದಿಸಿದ್ದಾಕೆಯೇ ದರೋಡೆಕೋರರಿಂದ ಹಣ ಎಗರಿಸಿದಳು?

ಚೆನ್ನೈ: ಒಂದು ವಾರದ ಮಗುವನ್ನು ಹಣದಾಸೆಗೆ ಕೊಟ್ಟು, ಮಗುವನ್ನೂ ಕಳೆದುಕೊಂಡು ಬಳಿಕ ಮಗುವನ್ನೂ ಕಳೆದುಕೊಂಡ ಯುವತಿಯೋರ್ವಳು ಗೋಳೋ ಎನ್ನುತ್ತ ಪೊಲೀಸ್ ಠಾಣೆ ಮೆಟ್ಟಿಲು ಏರಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. 

ಯಾಸ್ಮಿನ್ ವೆಪೇರಿ(28) ಎಂಬಾಕೆ ಮಗು ಹಾಗೂ ಹಣವನ್ನು ಕಳೆದುಕೊಂಡವಳು. ಈಕೆ ಹಣದಾಸೆಗಾಗಿ ತನ್ನ ಒಂದು ವಾರದ ಮಗುವನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ. ಆ ಹಣ ಪಡೆದು ದಾರಿಯಲ್ಲಿ ಬರುತ್ತಿದ್ದ ವೇಳೆ ದರೋಡೆಕೋರರು ಬಂದು ಆ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಇತ್ತ ಮಗುವೂ ಮಾರಾಟವಾಗಿದ್ದು, ಅತ್ತ ಹಣವೂ ಇಲ್ಲದ ಸ್ಥಿತಿಯಲ್ಲಿರೋ ಯಾಸ್ಮಿನ್‌ ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ. ಮಗುವನ್ನು ಪಡೆದಾಕೆಯೇ ದರೋಡೆಕೋರರನ್ನು ಬಿಟ್ಟು ಹಣವನ್ನು ದೋಚಿದ್ದಾಳೆ ಎಂದು ದೂರಿನಲ್ಲಿ ಆಕೆ ಹೇಳಿಕೆ ನೀಡಿದ್ದಾಳೆ. 

ಅಲ್ಲದೆ ಇದೀಗ ಅನಿವಾರ್ಯವಾಗಿ ಪೊಲೀಸರ ಮುಂದೆ ಮಗು ಮಾರಾಟ ಮಾಡಿರುವ ದುಷ್ಕೃತ್ಯವನ್ನು ಹೇಳಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಹಣಕ್ಕಾಗಿ ಮಗುವನ್ನು ಕೊಟ್ಟುಬಿಟ್ಟೆ ಎಂದು ಆಕೆ ಒಪ್ಪಿಕೊಂಡಿದ್ದು, ಹಣ ಕೊಟ್ಟು ಬರುತ್ತಿರುವಾಗಲೇ ಇಬ್ಬರು ಬೈಕ್‌ನಲ್ಲಿ ನನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ‌. ಪುರಸಾವಲ್ಕಮ್‌ ಸಮೀಪ ಬೆದರಿಸಿ ಹಣ ದೋಚಿದ್ದಾರೆ ಎಂದು ನಡೆದ ಘಟನೆಯನ್ನು ಕೂಲಂಕಷವಾಗಿ ತಿಳಿಸಿದ್ದಾಳೆ. 

ಆಕೆ ಖಾಲಿ ಪೇಪರ್‌ ಮೇಲೆ ಸಹಿ ಹಾಕಿಸಿಕೊಂಡು ಮಗು ಪಡೆದುಕೊಂಡಿರುವುದಾಗಿಯೂ ಪೊಲೀಸರಿಗೆ ತಿಳಿಸಿದ್ದಾಳೆ. ‘ನನ್ನ ಗಂಡ ಬಿಟ್ಟು ಹೋಗಿದ್ದು, ಈ ಸಂದರ್ಭ ನಾನು ಗರ್ಭಿಣಿಯಾಗಿದ್ದೆ. ಹಣವಿಲ್ಲದೇ ಮಗುವನ್ನು ತೆಗೆಸಿಕೊಳ್ಳಲು ಹೋಗಿದ್ದೆ. ಆಗ ಜಯಗೀತಾ ಎಂಬಾಕೆ ತನ್ನನ್ನು ಭೇಟಿಯಾಗಿ ಮಗುವನ್ನು ಹೆತ್ತರೆ ಅದನ್ನು ಮಾರಾಟ ಮಾಡಿ ದುಡ್ಡು ಕೊಡಿಸುವುದಾಗಿ ಹೇಳಿದ್ದರು. ಅದರಂತೆ ನಾನು ಮಗುವನ್ನು ಹೆತ್ತೆ. ನಂತರ ಅವರ ಕೈಗೆ ಅದನ್ನು ಕೊಟ್ಟೆ ಎಂದು ದೂರಿನಲ್ಲಿ ಆಸ್ಮಿನ್‌ ತಿಳಿಸಿದ್ದಾಳೆ. 

ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article