-->

Career Tips by IPS Officer- ಕಾಲೇಜು ಜೀವನ ಮುಂದಿನ ಭವಿಷ್ಯಕ್ಕೆ 'ಅರ್ಹತಾ ಸುತ್ತು' ಇದ್ದಂತೆ: ಪೊಲೀಸ್ ಆಯುಕ್ತ ಎನ್. ಶಶಿಕುಮಾರ್

Career Tips by IPS Officer- ಕಾಲೇಜು ಜೀವನ ಮುಂದಿನ ಭವಿಷ್ಯಕ್ಕೆ 'ಅರ್ಹತಾ ಸುತ್ತು' ಇದ್ದಂತೆ: ಪೊಲೀಸ್ ಆಯುಕ್ತ ಎನ್. ಶಶಿಕುಮಾರ್

ಕಾಲೇಜು ಜೀವನ ಮುಂದಿನ ಭವಿಷ್ಯಕ್ಕೆ ಕಾಲಿಡಲು 'ಅರ್ಹತಾ ಸುತ್ತು' ಇದ್ದಂತೆ: ಪೊಲೀಸ್ ಆಯುಕ್ತ ಎನ್. ಶಶಿಕುಮಾರ್





ಮೂಡುಬಿದಿರೆ: "ಪ್ರತಿಯೊಬ್ಬರ ಭವ್ಯ ಭವಿಷ್ಯದ ದಿಕ್ಕು ಅವರ ವಿದ್ಯಾರ್ಥಿ ಜೀವನದಲ್ಲೇ ರೂಪಿತಗೊಳ್ಳುತ್ತದೆ. ತಮ್ಮ ಶೈಕ್ಷಣಿಕ ಜೀವನದ ಪ್ರತಿಕ್ಷಣವನ್ನು ಸದುಪಯೋಗಪಡಿಸಿಕೊಂಡು, ಜೀವನದ ಗುರಿ ಡೆಗೆ ರಾತ್ರಿ ಹಗಲು ಶ್ರಮಿಸಿದರೆ ಮಾತ್ರ ಸುಂದರವಾದ ನಾಳೆಗಳು ನಿರ್ಮಾಣಗೊಳ್ಳುತ್ತವೆ" ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.





ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಮೊದಲ ವರ್ಷದ ಎಂಜಿನಿಯರಿಗ್ ವಿದ್ಯಾರ್ಥಿಗಳ ಪ್ರವೇಶಾತಿ ಕಾರ್ಯಕ್ರಮ- ‘ಆಳ್ವಾಸ್ ಆಗಮನ 2021-22 ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.



ಸಮಯ ಪರಿಪಾಲನೆ, ಶಿಸ್ತು, ತಾಳ್ಮೆ, ಪ್ರಾಮಾಣಿಕತೆ ಮತ್ತು ಏಕಾಗ್ರತೆ ಪ್ರತಿಯೊಬ್ಬರ ಯಶಸ್ವಿ ಜೀವನದ ಗುಟ್ಟು. ಪ್ರತಿಕ್ರಿಯೆಗೂ ಪ್ರತಿಕ್ರಿಯಿಸುವ ಮನಸ್ಥಿತಿ ಒಳ್ಳೆದಲ್ಲ. ಇದರಿಂದ ನಮ್ಮ ಸುತ್ತಲಿನವರ ವೈರತ್ವವನ್ನು ಬೆಳೆಸಿಕೊಳ್ಳುವ ಸಾಧ್ಯತೆಯೆ ಹೆಚ್ಚು. ಇನ್ನೊಬ್ಬರ ಬಗ್ಗೆ ಅನಗತ್ಯ ಟೀಕೆ- ಟಿಪ್ಪಣಿ, ಆದೇಶಗಳನ್ನು ಮಾಡಬೇಡಿ. ನಿಮ್ಮ ನಿಜವಾದ ವ್ಯಕ್ತಿತ್ವ ಜಗತ್ತಿಗೆ ಪರಿಚಯಿಸಿ.. ಸೋಗಿನ, ನಾಟಕೀಯದ ವ್ಯಕ್ತಿತ್ವ ಹೆಚ್ಚು ದಿನ ಬಾಳಲಾರದು. ಪ್ರತಿದಿನ ನಿಮ್ಮ ಜೀವನಕ್ಕೆ ಮೌಲ್ಯಯುತ ಅಂಶವನ್ನು ಸೇರ್ಪಡೆಗೊಳಿಸುತ್ತಾ ಸಾಗಿ ಎಂದು ಅವರು ಕಿವಿಮಾತು ಹೇಳಿದರು.




ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡದ ವ್ಯಕ್ತಿ ಯಾವಾಗಲೂ ಸಮಯದ ಅಭಾವವನ್ನು ಎದುರಿಸುತ್ತಾರೆ. ಬಾಲ್ಯದಲ್ಲೇ ನಾಯಕತ್ವ ಗುಣ ಆಳವಡಿಸಿಕೊಂಡರೆ ಭವಿಷ್ಯದಲ್ಲಿ ಸಾಕಷ್ಟು ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಅವರು ಹೇಳಿದರು.

ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ. ಕಠಿಣ ಪರಿಶ್ರಮವೇ ರಾಜಮಾರ್ಗ ಎಂದು ಶಶಿಕುಮಾರ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.




ಬಳಿಕ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದದಲ್ಲಿ UPSC ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುತ್ತವೆ. ಅಲ್ಲಿ ಅರ್ಹ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಿರಾತಂಕವಾಗಿ ಪಾಸ್ ಆಗುತ್ತಾರೆ ಎಂದರು. ವೃತಿಪರತೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾನು ಎಂದೂ ವೃತ್ತಿಧರ್ಮವನ್ನು ಮೀರಿ ನಡೆದಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದರು.



ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ಎಐಇಟಿಯ ಗಣಿತಶಾಸ್ರ್ರ ವಿಭಾಗದ ಮುಖ್ಯಸ್ಥೆ ಡಾ ಪ್ರಮೀಳಾ ಕೊಲ್ಕೆ ಕಾರ್ಯಕ್ರಮ ನಿರ್ವಹಿಸಿದರು. 

Ads on article

Advertise in articles 1

advertising articles 2

Advertise under the article