ಮಂಗಳೂರು; ಮಂಗಳೂರಿನ ಉಳಾಯಿಬೆಟ್ಟುವಿನಲ್ಲಿ ನಡೆದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಉಳಾಯಿಬೆಟ್ಟುವಿನ 8 ವರ್ಷದ ಬಾಲಕಿಯನ್ನು ನಾಲ್ವರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು.
ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಎಲ್ಲೆಡೆ ಆಗ್ರಹ ಕೇಳಿಬರುತ್ತಿದೆ. ಇದೇ ರೀತಿ ನಾಲ್ಕನೆ ತರಗತಿ ಕಲಿಯುತ್ತಿರುವ ಬಾಲಕಿಯೊಬ್ಬಳು ಮಂಗಳೂರು ಪೊಲೀಸ್ ಕಮೀಷನರ್ ಗೆ ಮನವಿ ಮಾಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾಳೆ.
ಮಂಗಳೂರಿನ ಪಣಂಬೂರಿನ ಕೇಂದ್ತೀಯ ವಿದ್ಯಾಲಯದಲ್ಲಿ ನಾಲ್ಕನೆ ತರಗತಿ ವಿದ್ಯಾರ್ಥಿನಿ , ಕುಳಾಯಿಯ ನಿರಂಜನ್ ಮತ್ತು ಪವಿತ್ರ ಎಂಬವರ ಪುತ್ರಿ ಚಾರ್ವಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಗೆ ಮನವಿ ಮಾಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾಳೆ