
ವಾಟ್ಸ್ಆ್ಯಪ್ ನಿಂದ ಹೊಸ ಫೀಚರ್ಸ್: ಇನ್ನು ಮುಂದೆ ಕಳುಹಿಸಿರುವ ಸಂದೇಶ ಡಿಲೀಟ್ ಗೆ 7 ದಿನ 8 ನಿಮಿಷ ಸಮಯಾವಕಾಶ
Thursday, November 25, 2021
ನವದೆಹಲಿ: ಜನಪ್ರಿಯ ಜಾಲತಾಣವಾದ ವಾಟ್ಸ್ಆ್ಯಪ್ ಹೊಸ ಫೀಚರ್ಸ್ ಗಳನ್ನು ಅಳವಡಿಸುವಲ್ಲಿ ಸದಾ ಮುಂದಿರುತ್ತೆ. ಇದೀಗ ಜಾಲತಾಣಿಗರ ಬೇಡಿಕೆಯಂತೆ ಮತ್ತೊಂದು ವಿಶೇಷ ಫೀಚರ್ಸ್ ಅನ್ನು ವಾಟ್ಸ್ಆ್ಯಪ್ ಬಿಡುಗಡೆ ಮಾಡಲಿದೆ.
ಇದೀಗ ನಾವು ಕಳುಹಿಸುವ ಸಂದೇಶಗಳನ್ನು ಡಿಲೀಟ್ ಮಾಡುವ ಅವಧಿಯನ್ನು ವಿಸ್ತರಿಸಲು ವಾಟ್ಸ್ಆ್ಯಪ್ ಸಿದ್ಧತೆ ನಡೆಸುತ್ತಿದೆ. ಈಗ ನಾವು ಕಳುಹಿಸಿರುವ ಮೆಸೇಜ್ ಅನ್ನು ಡಿಲೀಟ್ ಮಾಡಲು ಪ್ರಸ್ತುತ 1 ಗಂಟೆ 8 ನಿಮಿಷ 16 ಸೆಕೆಂಡ್ ಗಳ ಕಾಲಾವಕಾಶ ಇತ್ತು. ಆದರೆ ಇನ್ನು ಮುಂದೆ ಕಳಿಸಿರುವ ಸಂದೇಶವನ್ನು ಅಳಿಸಿ ಹಾಕಲು ಒಂದು ವಾರ ಸಮಯ ಕೊಡುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ವಾಟ್ಸ್ಆ್ಯಪ್ ಬೀಟಾ ಇನ್ಫೋ, ವಾಟ್ಸ್ಆ್ಯಪ್ ಮುಂದಿನ ದಿನಗಳಲ್ಲಿ ನೀವು ಈಗಾಗಲೇ ಕಳುಹಿಸಿರುವ ಸಂದೇಶಗಳನ್ನು ಡಿಲೀಟ್ ಮಾಡಲು 7 ದಿನ 8 ನಿಮಿಷ ಸಮಯಾವಕಾಶ ನೀಡಲಿದೆ ಎಂದು ತಿಳಿಸಿದೆ.