ಫರಂಗಿಪೇಟೆಯಲ್ಲಿ ಅಪ್ರಾಪ್ತ ಬಾಲಕಿಗೆ ರಿಕ್ಷಾ ಚಾಲಕನಿಂದ ಲೈಂಗಿಕ ಕಿರುಕುಳ- 5 ತಿಂಗಳ ಹಿಂದೆ ಈಕೆಯ ಮೇಲೆ ಮತ್ತಿಬ್ಬರಿಂದ ನಡೆದಿತ್ತು ಅತ್ಯಾಚಾರ- ಮೂವರು...


ಮಂಗಳೂರು; ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯ ಬೆನ್ನಿಗೆ ಐದು ತಿಂಗಳ ಹಿಂದೆ ಆಕೆಯ ಮೇಲೆ ಇಬ್ಬರು ಅತ್ಯಾಚಾರವೆಸಗಿದ ಬಗ್ಗೆ ದೂರು ದಾಖಲಾಗಿದೆ.


ನವೆಂಬರ್ 4 ರಂದು ಬಂಟ್ವಾಳ ತಾಲೂಕಿನ ಮಹಿಳೆಯೋರ್ವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ಬಂದು ಅಪ್ರಾಪ್ತ ಬಾಲಕಿಯಾದ ತನ್ನ ಮಗಳಿಗೆ ಫರಂಗಿಪೇಟೆ ರಿಕ್ಷಾ ಚಾಲಕನು ಮೈ ಕೈ ಮುಟ್ಟಿ ಲೈಂಗಿಕ ಶೋಷಣೆ ಮಾಡಿದ್ದಾನೆಂಬ ದೂರು ನೀಡಿದ್ದರು. 

ಅವರ ದೂರಿನ  ಮೇರೆಗೆ ಕಲಂ 354 [ಎ] ಐ.ಪಿ.ಸಿ ಮತ್ತು ಕಲಂ 7, 8 ಪೋಕ್ಸೋ ಆಕ್ಟ್‌ ರಂತೆ ಪ್ರಕರಣ ದಾಖಲಿಸಿ ಲೈಂಗಿಕ ಕಿರುಕುಳ ನೀಡಿದ  ಆರೋಪಿ ರಿಕ್ಷಾ ಚಾಲಕ ರಿಜ್ವಾನ್‌  ಎಂಬವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.


ಇದರ ಮಧ್ಯೆ ಅಪ್ರಾಪ್ತ ಬಾಲಕಿಯು ತನ್ನ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿ ಸುಮಾರು 5 ತಿಂಗಳ ಹಿಂದೆ ಇಬ್ಬರು ಯುವಕರು ಅತ್ಯಾಚಾರವೆಸಗಿದ ಬಗ್ಗೆ ದೂರು ನೀಡಿದ್ದಾಳೆ.
ಈ ಇಬ್ಬರು ಯುವಕರು ಪರಿಚಿತರಾಗಿ ಈಕೆಯನ್ನು ತಾವಿದ್ದಲ್ಲಿಗೆ ಕರೆಸಿಕೊಂಡು  ಒಬ್ಬರಾದ ಮೇಲೇ ಇನ್ನೊಬ್ಬರು ಜೊತೆಯಲ್ಲಿ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದಾರೆ. 


 ಅದರಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕಲಂ 376ಡಿ, 506 ಜೊತೆಗೆ 34 ಐ.ಪಿ.ಸಿ ಮತ್ತು ಕಲಂ 4, 5, [ಜಿ], 6 ಪೋಕ್ಸೋ ಆಕ್ಟ್‌ ರಂತೆ ಪ್ರಕರಣ ದಾಖಲಿಸಿ ಆರೋಪಿಗಳಾದ ಅರ್ಕುಳದ ಮಹಮ್ಮದ್‌ ಖಾಸೀಂ, ಮತ್ತು ಅಜ್ಮಲ್‌ ಹುಸೈನ್‌ ಎಂಬವರನ್ನು ಬಂಧಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu