-->

5 ಸಾವಿರದಷ್ಟು ಹೆರಿಗೆ ಮಾಡಿಸಿದ್ದ ದಾದಿ ತನ್ನ ಹೆರಿಗೆಯಲ್ಲಿ ಮೃತ್ಯು!

5 ಸಾವಿರದಷ್ಟು ಹೆರಿಗೆ ಮಾಡಿಸಿದ್ದ ದಾದಿ ತನ್ನ ಹೆರಿಗೆಯಲ್ಲಿ ಮೃತ್ಯು!

ಮಹಾರಾಷ್ಟ್ರ: ಸುಮಾರು 5 ಸಾವಿರದಷ್ಟು ಹೆರಿಗೆ ಮಾಡಿಸಿದ್ದ 38 ವರ್ಷದ ದಾದಿಯೊಬ್ಬರು ತಮ್ಮ ಹೆರಿಗೆಯ ವೇಳೆ ಕಾಣಿಸಿಕೊಂಡ  ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಡೆದಿದೆ.

ಜ್ಯೋತಿ ಗಾವ್ಲಿ ಎಂಬ ಈ ದಾದಿ ನವೆಂಬರ್ 2 ರಂದು ಹಿಂಗೋಲಿ ಸರಕಾರಿ ಆಸ್ಪತ್ರೆಯಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ನ್ಯುಮೋನಿಯಾ ಹಾಗೂ  ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ನೆರೆಯ ನಾಂದೇಡ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

"ಜ್ಯೋತಿ ಗ್ಲಾವಿಯವರು, ಹಿಂಗೋಲಿ ಸಿವಿಲ್ ಆಸ್ಪತ್ರೆಯ ಲೇಬರ್ ರೂಮ್‌ನಲ್ಲಿ ನಿಯೋಜಿಸಲ್ಪಟ್ಟಿದ್ದರು. ಅವರು ತಮ್ಮ ಹೆರಿಗೆಯ ಕೊನೆಯ ದಿನದವರೆಗೂ ಅಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಹೆರಿಗೆಗೆ ತೆರಳಿದ್ದರು" ಎಂದು ಹಿಂಗೋಲಿ ಸಿವಿಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗೋಪಾಲ್ ಕದಂ ತಿಳಿಸಿದ್ದಾರೆ. 

ಗಾವ್ಲಿ ಕಳೆದ ಎರಡು ವರ್ಷಗಳಿಂದ ಸಿವಿಲ್ ಆಸ್ಪತ್ರೆಯಲ್ಲಿ ದಾದಿಯಾಗಿ ವೃತ್ತಿ ನಿರ್ವಹಿಸಿದ್ದರು. ಈ ಹಿಂದೆ ಎರಡು ಬೇರೆ ಆರೋಗ್ಯ ಕೇಂದ್ರಗಳಲ್ಲಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು ಎಂದು ಅವರು ಹೇಳಿದರು. ನವೆಂಬರ್ 2 ರಂದು ಜ್ಯೋತಿ ಗ್ಲಾವಿಯವರು ಸಿವಿಲ್ ಆಸ್ಪತ್ರೆಯಲ್ಲಿ ಹೆರಿಗೆಗೆ ಒಳಗಾಗಿದ್ದರು. ಅದೇ ದಿನ, ಸಮಸ್ಯೆ ಕಾಣಿಸಿಕೊಂಡ ಕಾರಣ ನಾಂದೇಡ್‌ನಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿತ್ತು ಎಂದು ಅಧಿಕಾರಿ ಹೇಳಿದರು. 

ಗಾವ್ಲಿಯವರಿಗೆ ಹೆರಿಗೆ ಬಳಿಕ  ನ್ಯೂಮೋನಿಯ ಕಾಣಿಸಿಕೊಂಡಿತ್ತು. ಅವರನ್ನು ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇಡಬೇಕಾಗಿದ್ದರಿಂದ ನಾಂದೇಡ್‌ನಲ್ಲಿರುವ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರವಿವಾರ ನಿಧನರಾಗಿದ್ದಾರೆ. ನಾವು ಸಾಮಾನ್ಯವಾಗಿ ನಮ್ಮ ಆಸ್ಪತ್ರೆಯಲ್ಲಿ ಒಂದು ದಿನದಲ್ಲಿ 15 ಹೆರಿಗೆಗಳನ್ನು ನಡೆಸುತ್ತೇವೆ. ಸುಮಾರು ಐದು ವರ್ಷಗಳ ಸೇವಾ ಅವಧಿಯಲ್ಲಿ ಅವರು ಸುಮಾರು 5,000 ಹೆರಿಗೆಗಳಲ್ಲಿ ಸಹಾಯ ಮಾಡಿರಬೇಕು ಎಂದು ಅಧಿಕಾರಿ ಹೇಳಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ಗೋಪಾಲ್ ಕದಂ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article