
ದಾಖಲೆಯ ಮೊತ್ತದಲ್ಲಿ ಬಂಡೂರು ಟಗರು ಮಾರಾಟ: 2 ವರ್ಷದಲ್ಲಿ ಈ ರೈತ ಗಳಿಸಿದ್ದು 1.91 ಲಕ್ಷ ರೂ.
11/07/2021 08:41:00 PM
ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರದ ರೈತರೋರ್ವರು ದಾಖಲೆಯ ಮೊತ್ತಕ್ಕೆ ತಮ್ಮ ಟಗರುವನ್ನು ಮಾರಾಟ ಮಾಡಿದ್ದು ಸುತ್ತಮುತ್ತಲಿನ ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಈ ಮೂಲಕ ಅವರು ಕೇವಲ ಎರಡೇ ವರ್ಷಕ್ಕೆ 1.91 ಲಕ್ಷ ರೂ. ಗಳಿಸಿದ್ದಾರೆ.
ಹೌದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರದ ಸಣ್ಣಪ್ಪ ಎಂಬ ರೈತನಲ್ಲಿ ಬಂಡೂರು ಟಗರೊಂದು ಇದ್ದು, ಅವರು ಅದನ್ನು ಎರಡು ವರ್ಷಗಳ ಹಿಂದೆ 1.05 ಲಕ್ಷ ರೂ. ಗೆ ಖರೀದಿಸಿದ್ದರು. ಇದೀಗ ಇದೇ ಟಗರನ್ನು ಬಿದರಕೋಟೆಯ ಕೃಷ್ಣಗೌಡ 1.91 ಲಕ್ಷ ರೂ. ದಾಖಲೆಯ ಮೊತ್ತವನ್ನು ನೀಡಿ ಖರೀದಿಸಿದ್ದಾರೆ. ಈ ಮೂಲಕ ಮಂಡ್ಯ ಜಿಲ್ಲೆಯಲ್ಲಿಯೇ ಅತ್ಯಧಿಕ ಬೆಲೆಯಲ್ಲಿ ಟಗರು ಮಾರಾಟದ ದಾಖಲೆ ಸೃಷ್ಟಿಯಾಗಿದೆ.
ದಾಖಲೆಯ ಮೊತ್ತದಲ್ಲಿ ಮಾರಾಟವಾಗಿರೋದರಿಂದ ಗ್ರಾಮಸ್ಥರು ಈ ಟಗರಿನ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ ಗ್ರಾಮದ ಹಿರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಟಗರು ಖರೀದಿದಾರ ಕೃಷ್ಣಗೌಡರೊಂದಿಗೆ ಟಗರುವನ್ನು ಕಳುಹಿಸಿಕೊಟ್ಟಿದ್ದಾರೆ. ದಾಖಲೆಯ ಮೊತ್ತದಲ್ಲಿ ಮಾರಾಟವಾಗಿರುವ ಈ ಟಗರುವನ್ನು ವೀಕ್ಷಣೆ ಮಾಡಲು ಜನರ ದಂಡೇ ಸೇರಿತ್ತು.