ಬೇರೊಬ್ಬನೊಂದಿಗೆ ನಿಶ್ಚಿತಾರ್ಥವಾಗಿರುವ ಪ್ರೇಯಸಿಗೆ 18 ಬಾರಿ ಚೂರಿಯಿಂದ ಇರಿದ ಭಗ್ನ ಪ್ರೇಮಿ!

ಹೈದರಾಬಾದ್: ಮದುವೆಯಾಗಲು ಒಲ್ಲೆಯೆಂದು ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಪ್ರೇಯಸಿಗೆ ಭಗ್ನ ಪ್ರೇಮಿಯೊಬ್ಬ 18 ಬಾರಿ ಇರಿದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಬಸವರಾಜ ಎಂಬ ಆರೋಪಿ ಚೂರಿಯಿಂದ ಪ್ರೇಯಸಿಯನ್ನು ಇರಿದವನು. ಆರೋಪಿ ಬಸವರಾಜ ಹಾಗೂ ಆತನ ಪ್ರೇಯಸಿ ಸಿರಿಶಾ ವಿಕಾರಾಬಾದ್ ಜಿಲ್ಲೆಯ ದೌಲತ್ ಬಾದ್ ನ ನಿವಾಸಿಗಳಾಗಿದ್ದು, ಇಬ್ಬರ ನಡುವೆ ಸಂಬಂಧ ಇದ್ದಿರುವುದಾಗಿ ತಿಳಿದು ಬಂದಿದೆ.

ಚೂರಿ ಇರಿತಕ್ಕೊಳಗಾಗಿರುವ ಸಿರಿಶಾ ಆತ ತನ್ನ ಗೆಳೆಯ ಎಂದು ತಿಳಿಸಿದ್ದಾಳೆ.‌ ಇತ್ತೀಚೆಗಷ್ಟೇ ಬಸವರಾಜನನ್ನು ವಿವಾಹವಾಗಲು ನಿರಾಕರಿಸುವುದಕ್ಕೆ ಈ ಕೃತ್ಯ ಎಸಗಿರುವುದಾಗಿ ಆಕೆ ತಿಳಿಸಿದ್ದಾಳೆ. 

ಎರಡು ತಿಂಗಳ ಹಿಂದೆಯಷ್ಟೇ ಯುವತಿಗೆ ಮತ್ತೋರ್ವ ಯುವಕನೊಂದಿ ವಿವಾಹ ನಿಶ್ಚಿತಾರ್ಥವಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, ಗ್ರೇಟರ್ ಹೈದರಬಾದ್ ನಲ್ಲಿನ ಹಸ್ತಿನಾಪುರಂನಲ್ಲಿ ವಾಸವಾಗಿದ್ದ ಯುವತಿಯ ಕೋಣೆಗೆ ನುಗ್ಗಿದ ಆರೋಪಿಯು ಆಕೆಗೆ 18 ಬಾರಿ ಚೂರಿಯಿಂದ ಇರಿದಿದ್ದಾನೆ. ಸಂತ್ರಸ್ತೆ ಸಿರಿಶಾ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.