-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಗೋವಾ ರಾಜ್ಯದ ಅತ್ಯಂತ ಹಿರಿ ವಯಸ್ಸಿನ ಅಜ್ಜಿ 113ವರ್ಷಕ್ಕೆ ಬಾರದ ಲೋಕಕ್ಕೆ ಪ್ರಯಾಣ

ಗೋವಾ ರಾಜ್ಯದ ಅತ್ಯಂತ ಹಿರಿ ವಯಸ್ಸಿನ ಅಜ್ಜಿ 113ವರ್ಷಕ್ಕೆ ಬಾರದ ಲೋಕಕ್ಕೆ ಪ್ರಯಾಣ

ಪಣಜಿ: ಗೋವಾ ರಾಜ್ಯದ ಅತೀ ಹಿರಿಯ ನಾಗರಿಕರೆಂದು ಹೆಗ್ಗಳಿಕೆಗೆ ಪಾತ್ರವಾದ ಕಾಮುರ್ಲಿಯಲ್ಲಿನ 113 ವರ್ಷದ ಲಾರ್ಡೆಸ್ ಕಾನ್ಸೆಕಾವೊ ಲೋಬೊ ಎಂಬ ಹಿರಿಯಜ್ಜಿ ನಿಧನ ಹೊಂದಿದ್ದಾರೆ.

ಹಿರಿಯಜ್ಜಿ ಲಾರ್ಡೆಸ್ ಕಾನ್ಸೆಕಾವೊ ಲೋಬೊ ಅವರು 8 ಡಿಸೆಂಬರ್ 1908 ರಲ್ಲಿ ಜನಿಸಿದ್ದರು. ಗೋವಾದ ಅತೀ ಹಿರಿಯ ವಯೋವೃದ್ಧೆ ಎಂದೇ ಪ್ರಸಿದ್ಧಿ ಪಡೆದಿದ್ದ ಲಾರ್ಡೆಸ್ ಕಾನ್ಸೆಕಾವೊ ತಮ್ಮ ಕುಟುಂಬದ 3 ಪೀಳಿಗೆಯನ್ನು ಕಂಡಿದ್ದಾರೆ. ಇವರು 1944 ರಲ್ಲಿ‌ ಜೋಸ್ ಮರಿಯಾ ಲೋಬೋ ಅವರನ್ನು ಗೋವಾದ ಕ್ಯಾಮುರ್ಲಿಮ್‌ನಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ನಾಲ್ವರು ಮಕ್ಕಳಿದ್ದರು.

90ರ ದಶಕದಲ್ಲಿ ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಿದ್ದ ಲಾರ್ಡೆಸ್ ಕಾನ್ಸೆಕಾವೊ ಲೋಬೊ ಅವರು, 103ನೇ ವಯಸ್ಸಿನವರೆಗೂ ತಮ್ಮ ವೈಯುಕ್ತಿಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು.‌ ಆದರೆ 103 ನೇ ವಯಸ್ಸಿನಲ್ಲಿ ಗ್ಯಾಂಗ್ರಿನ್‌ನಿಂದಾಗಿ ಕಾಲ್ಬೆರಳುಗಳನ್ನು ಕತ್ತರಿಸಿದ ಬಳಿಕ, ಅವರು ಹೆಚ್ಚಾಗಿ ಗಾಲಿಕುರ್ಚಿಯನ್ನು ಅವಲಂಬಿಸಿದ್ದರು.

ಅಜ್ಜಿಯ ಕುಟುಂಬಸ್ಥರು ಪ್ರತಿ ವರ್ಷವೂ ಹುಟ್ಟುಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಿದ್ದರು. ಇದೀಗ ಈ ಹಿರಿಯಜ್ಜಿಯು ತಮ್ಮ ಅಪಾರ ಬಂಧು ಬಳಗವನ್ನು ಅಗಲಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.

Ads on article

Advertise in articles 1

advertising articles 2

Advertise under the article