-->
1 ರೂ. ನಾಣ್ಯ ನೀಡಿ ಪುಸಲಾಯಿಸಿ ಐದರ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ!

1 ರೂ. ನಾಣ್ಯ ನೀಡಿ ಪುಸಲಾಯಿಸಿ ಐದರ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ!

ಕೊಪ್ಪಳ: ಮನೆಯಲ್ಲಿ ಆಟವಾಡಿಕೊಂಡಿದ್ದ ಐದರ ಬಾಲಕಿಗೆ 1 ರೂ. ನಾಣ್ಯ ನೀಡಿ ಅತ್ಯಾಚಾರ‌ ಮಾಡಿರುವ ಪೈಶಾಚಿಕ ಕೃತ್ಯ ಗಂಗಾವತಿಯಲ್ಲಿ‌ ಘಟನೆ ನಡೆದಿದೆ.

ಸುರೇಶ ಅಲಿಯಾಸ್ ಸೂರಿ ಅತ್ಯಾಚಾರ ಎಸಗಿರುವ ಆರೋಪಿ. ಬಾಲಕಿಯ ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಗೆ ಬಂದಿರುವ ಸುರೇಶ, ಬಾಲಕಿಗೆ ತಿಂಡಿ ತಿನ್ನಲೆಂದು 1 ರೂ‌. ಕೊಟ್ಟಿದ್ದಾನೆ. ಬಳಿಕ ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. 

ಈ ಬಗ್ಗೆ ತಿಳಿದ ಬಾಲಕಿಯ ತಾಯಿ ದೂರು ನೀಡಿದ್ದು, ಆರೋಪಿಯನ್ನು ಗಂಗಾವತಿ ಪೊಲೀಸರು ಬಂಧಿಸಿದ್ದಾರೆ. ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article