ರಿಕ್ಷಾವಾಲಾನಿಗೆ ಮೂರಂತಸ್ತಿನ ಮನೆ ಸೇರಿದಂತೆ 1 ಕೋಟಿ ರೂ. ಆಸ್ತಿ ದಾನ ಮಾಡಿದ ಮಹಿಳೆ

ಕಟಕ್: ಮಹಿಳೆಯೋರ್ವರು‌ ಮೂರು ಅಂತಸ್ತಿನ ಮನೆ ಸೇರಿದಂತೆ 1 ಕೋಟಿ ರೂ.ಗೂ ಅಧಿಕ ಬೆಳೆಬಾಳುವ ತನ್ನ ಆಸ್ತಿಯನ್ನು ರಿಕ್ಷಾ ತಳ್ಳುವಾತನಿಗೆ ದಾನಗೈದಿರುವ ಘಟನೆಯೊಂದು ಒಡಿಶಾದ ಕಟಕ್ ನಲ್ಲಿ ನಡೆದಿದೆ. 

 ಕಟಕ್ ನ ಸುತಾಹತ್ ಕ್ರಶ್ಚಿಯನ್ ಸಹಿ ಪ್ರದೇಶದ ನಿವಾಸಿ ಮಿನಾಟಿ ಪಟ್ನಾಯಕ್(63) ಎಂಬವರೇ ದಾನ ಮಾಡಿರುವ ಮಹಿಳೆ. 

ಈಕೆಯ ಪತಿ ಉದ್ಯಮಿ ಕೃಷ್ಣ ಕುಮಾರ್ (70) ಹಾಗೂ ಏಕೈಕ ಮಗಳು ಕೋಮಲ್ ಕುಮಾರಿ (31) ಕಳೆದ ವರ್ಷ ಮೃತಪಟ್ಟಿದ್ದರು. ಸ್ಲಮ್ ನಲ್ಲಿ ವಾಸಿಸುತ್ತಾ, ಕಟಕ್ ನ ಬೀದಿಗಳಲ್ಲಿ ರಿಕ್ಷಾ ತಳ್ಳುವ ಮೂಲಕ ಜೀವನ ಸಾಗಿಸುತ್ತಿದ್ದ ಬುದ್ದ ಸಮಾಲ್(53) ಎಂಬವರಿಗೆ ಮಿನಾಟಿ ಇಷ್ಟೊಂದು ಮೊತ್ತದ ಆಸ್ತಿಯನ್ನು ದಾನ ಮಾಡಿದವರು. 

ಬುದ್ಧ ಸಮಾಲ್ ಕಳೆದ 25 ವರ್ಷಗಳಿಂದ ಮಿನಾಟಿ ಪಟ್ನಾಯಕ್ ಕುಟುಂಬಕ್ಕೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈ ಕಾರಣಕ್ಕಾಗಿ ಪತಿ ಹಾಗೂ ಪುತ್ರಿಯನ್ನು ಕಳೆದುಕೊಂಡ ಮಹಿಳೆ ತನ್ನ ಮೂರು ಅಂತಸ್ತಿನ ಮನೆ, ಒಡವೆ ಸೇರಿದಂತೆ ಒಂದು ಕೋಟಿ ರೂ.ಗೂ ಅಧಿಕ ಬೆಲೆಬಾಳುವ ತನ್ನ ಎಲ್ಲಾ ಆಸ್ತಿಯನ್ನು  ರಿಕ್ಷಾವಾಲಾ ಬುದ್ಧ ಸಮಾಲ್ ಹೆಸರಿನಲ್ಲಿ ಶನಿವಾರ ವಿಲ್ ಬರೆದಿಟ್ಟಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಮಿನಾಟಿ ಪಟ್ನಾಯಕ್, ಕಳೆದ ವರ್ಷ ನನ್ನ ಪತಿ ಹಾಗೂ ಪುತ್ರಿಯನ್ನು ಕಳೆದುಕೊಂಡಿದ್ದೆ. ಈಗ ನಾನು ನನ್ನ ಮರಣವನ್ನು ಎದುರು ನೋಡುತ್ತಿದ್ದೇನೆ. ನಾನು ನನ್ನ ಎಲ್ಲಾ ಆಸ್ತಿಗಳನ್ನು ಬಡವರಿಗೆ ದಾನ ಮಾಡಲು ಇಚ್ಚಿಸಿದ್ದೇನೆ. ಕಳೆದ 25 ವರ್ಷಗಳಿಂದ ಬುದ್ಧ ಸಮಾಲ್ ನನ್ನ ಕುಟುಂಬಕ್ಕೆ ಎಲ್ಲಾ ವಿಷಯಗಳಲ್ಲೂ ಸಹಾಯ ಮಾಡುತ್ತಿದ್ದಾನೆ. ಆತನಿಗೆ ನಾನು ಆಭಾರಿಯಾಗಿದ್ದು, ಬುದ್ದ ಸಮಾಲ್ ನ ಕುಟುಂಬ ಸ್ಲಮ್ ನಲ್ಲಿ ವಾಸಿಸುತ್ತಿದ್ದರು. ಅವರ ಸ್ವಂತ ಮನೆ ಎಂಬ ಕನಸು ನನಸಾಗಬೇಕಿದೆ. ಆದ್ದರಿಂದ ಮನೆ ಸೇರಿದಂತೆ ಆಸ್ತಿ, ಒಡವೆಗಳನ್ನು ದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu