ಕೊಡಗಿನಲ್ಲಿ ಯುವತಿ ಆತ್ಮಹತ್ಯೆ ಪ್ರಕರಣ: ಮಹತ್ತರ ತಿರುವಿಗೆ ಕಾರಣವಾದ ವಾಟ್ಸ್‌ಆ್ಯಪ್ ಚಾಟಿಂಗ್

ಕೊಡಗು: ನೇಣಿಗೆ ಕೊರಳೊಡ್ಡಿ ಮೃತಪಟ್ಟಿರುವ ಯುವತಿಯ ಪ್ರಕರಣಕ್ಕೆ ಮೊಬೈಲ್ ನ ಚ್ಯಾಟಿಂಗ್ ನಿಂದ ಹೊಸ ತಿರುವು ದೊರಕಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅ್ಯಂಗೇರಿ ಗ್ರಾಮದ ಅಮೀರ(20) ಆತ್ಮಹತ್ಯೆ ಮಾಡಿಕೊಂಡಾಕೆ. ಆಕೆಯ ಪತಿ ರುಬೈಸ್ ಕಿರುಕುಳವೇ ಆಕೆಯ ಆತ್ಮಹತ್ಯೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.  

11 ತಿಂಗಳ ಹಿಂದೆ ರುಬೈಸ್ ಹಾಗೂ ಅಮೀರ ವಿವಾಹ ನಡೆದಿತ್ತು. ಇದೀಗ ಅಮೀರ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ 
ಸಾವಿಗೆ ಕೆಲವೇ ನಿಮಿಷಗಳ ಮೊದಲು ಬಂದಿರುವ ಪತಿ ರುವೈಸ್​ ವಾಯ್ಸ್ ಮೆಸೇಜ್ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಆ ವಾಯ್ಸ್ ಮೆಸೇಜ್ ನಲ್ಲಿ ಆತ ಎರಡು ಬಾರಿ ತಲಾಖ್ ನೀಡಿದ್ದಾನೆ. ವಾಟ್ಸ್ಆ್ಯಪ್​ ವಾಯ್ಸ್​ ಮೆಸೇಜ್ ನಲ್ಲಿ ತಲಾಖ್ ನೀಡಿರುವ ಬೆನ್ನಿಗೆ ಅಮೀರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಭಾರತದಲ್ಲಿ ತ್ರಿವಳಿ ತಲಾಖ್​ ಸಿಂಧು ಅಲ್ಲದಿದ್ದರೂ, ಪತಿಯ ತಲಾಖ್​ ಎಂಬ ವಾಯ್ಸ್​ ಮೆಸೇಜ್​ನಿಂದ ನೊಂದ ಅಮೀರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಮೀರಾ ಮತ್ತು ರುಬೈಸ್​ ಕಾಲೇಜು ದಿನಗಳಲ್ಲೇ ಪ್ರೀತಿಸಿದ್ದು, ಪಿಯುಸಿ ಮುಗಿಯುತ್ತಿದ್ದಂತೆ ಇಬ್ಬರೂ ಹಠಕ್ಕೆ ಬಿದ್ದು ಪೋಷಕರನ್ನು ಒಪ್ಪಿಸಿ ವಿವಾಹವಾಗಿದ್ದರು. ಕಳೆದ ನವೆಂಬರ್​ ತಿಂಗಳಲ್ಲಿ ವಿವಾಹವಾಗಿದ್ದು, ಈ ಸಂದರ್ಭ 25 ತೊಲ ಚಿನ್ನ ಕೊಡುವಂತೆ ಪತಿ ರುಬೈಸ್​ ಕುಟುಂಬ ಬೇಡಿಕೆ ಇಟ್ಟಿತ್ತು . ಆದರೆ ಬಡತನದಲ್ಲಿದ್ದ ಅಮೀರಾಳ ತಂದೆ ಮೊಹಮ್ಮದ್​ 12 ತೊಲ ಒಡವೆ ಹಾಕಿ ಚೆನ್ನಾಗಿಯೇ ವಿವಾಹ ನೆರವೇರಿಸಿದ್ದರು. ವಿವಾಹದ ಬಳಿಕ  ಅಮೀರಾಳಿಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ಪ್ರತಿದಿನ ಚಿನ್ನ ತರುವಂತೆ ಪತಿಮನೆಯವರು ಪೀಡಿಸುತ್ತಿದ್ದರು. ಹಿಂಸೆಯನ್ನು ತಾಳಲಾರದೆ ಮನೆಯಲ್ಲಿ‌‌ ಈ ಬಗ್ಗೆ ದೂರಿದ್ದಳು. ಅಲ್ಲಿ ಹಿಂಸೆ ಹೆಚ್ಚಾಗುತ್ತಿದ್ದಂತೆ ತಂದೆ​ ಸ್ವತಃ ಹೋಗಿ ಮಗಳನ್ನು ತವರು ಮನೆಗೆ ಕರೆದುಕೊಂಡು ಬಂದಿದ್ದರು. ಕಳೆದೊಂದು ತಿಂಗಳಿನಿಂದ ಅಮೀರಾ ತನ್ನ ತವರು ಮನೆಯಲ್ಲೇ ಉಳಿದಿದ್ದಳು.

ಆ ಬಳಿಕ ಫೋನ್ ಕರೆ ಮಾಡಿ ಕಿರುಕುಳ​ ನೀಡುತ್ತಿದ್ದ ಪತಿ ರುಬೈಸ್​ ಚಿನ್ನ ಅಥವಾ ಹಣ ತಾರದೆ ತನ್ನ ಮನೆಗೆ ಹೋಗದಂತೆ ಆತ ಪತ್ನಿ ತಾಕೀತು ಮಾಡುತ್ತಿದ್ದ. ಮಾತ್ರವಲ್ಲದೆ ಇತ್ತೀಚಿನ ಕೆಲ ದಿನಗಳಿಂದ ನೀನು ಸಾಯಿ, ನಾನು ಬೇರೆ ಹುಡುಗಿಯನ್ನು ನೋಡಿದ್ದೇನೆ. ಅವಳನ್ನೇ ಮದುವೆಯಾಗುತ್ತೇನೆ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದ. ಇದೀಗ ಆತ ವಾಟ್ಸ್ಆ್ಯಪ್ ‌ಮೂಲಕ ತಲಾಖ್ ನೀಡಿರುವುದನ್ನು ಕಂಡು ಅಮೀರ ವಾಯ್ಸ್ ಮೆಸೇಜ್ ಬಂದ ಐದು ನಿಮಿಷಗಳಲ್ಲೇ ಐದು ನಿಮಿಷದಲ್ಲೇ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಪೊಲೀಸರು ಕೇವಲ ರುಬೈಸ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿಕೊಂಡಿದ್ದು, ಆತನ‌ ಹೆತ್ತವರ ವಿರುದ್ಧ ಎಫ್​ಐಆರ್​ ದಾಖಲಿಸಿಲ್ಲ. ಈ ಬಗ್ಗೆ ಅಸಮಾಧಾನ ವ್ಯಜಕ್ತಪಡಿಸಿರುವ ಅಮೀರ ತಂದೆ  ಇದೀಗ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ.