ಕಾಸರಗೋಡು: ಕಾಲೇಜು ವಿದ್ಯಾರ್ಥಿನಿಯೋರ್ವಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಪತ್ತೆಯಾಗಿದೆ.
ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ ಮಹಾಲಿಂಗ ನಾಯ್ಕ ಹಾಗೂ ಕುಮುದಾಕ್ಷಿ ದಂಪತಿಗಳ ಪುತ್ರಿ, ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಶ್ರಾವ್ಯಾ(20) ಎಂದು ಮೃತಪಟ್ಟ ಯುವತಿ.
ಶ್ರಾವ್ಯಾ ಅ.29ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.