-->
ವಿಟ್ಲದಲ್ಲಿ ಕೆರೆಗೆ ಹಾರಿ ಯುವತಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಹಲವರ ಹೆಸರು ಉಲ್ಲೇಖ

ವಿಟ್ಲದಲ್ಲಿ ಕೆರೆಗೆ ಹಾರಿ ಯುವತಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಹಲವರ ಹೆಸರು ಉಲ್ಲೇಖ

ವಿಟ್ಲ: ಯುವತಿಯೋರ್ವಳು ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಮೃತಪಟ್ಟ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಸಮೀಪ ನಡೆದಿದೆ. 

ವಿಟ್ಲ ಕಸಬಾ ಗ್ರಾಮ ನೆತ್ರಕೆರೆ ನಿವಾಸಿ ನಿಶ್ಮಿತಾ (22) ಮೃತ ದುರ್ದೈವಿ.

ನಿನ್ನೆ ಮುಂಜಾನೆ ಕೆರೆಯಲ್ಲಿ‌ ಆಕೆಯ ಮೃತದೇಹ ಪತ್ತೆಯಾಗಿದೆ. ಕೆರೆಯ ಬಳಿ ಆಕೆ ಬರೆದಿಟ್ಟ ಡೆತ್ ನೋಟ್  ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದೆ.‌ 

ನಿಶ್ಮಿತಾ ಸ್ಥಳೀಯ ಡೆಂಟಲ್ ಕ್ಲಿನಿಕ್ ನಲ್ಲಿ ಉದ್ಯೋಗದಲ್ಲಿದ್ದರು. ಅ.10ರ ಸಂಜೆಯಿಂದ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅ.11ರಂದು ಮುಂಜಾನೆ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಅವರು ಬರೆದಿಟ್ಟ ಡೆತ್​​ನೋಟ್​​ನಲ್ಲಿ ಕೆಲವರ ಹೆಸರು ಉಲ್ಲೇಖವಿದೆ ಎನ್ನಲಾಗಿದೆ. 

ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article