ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಉಪ್ಪಿನಂಗಡಿ ಸೇತುವೆಯಿಂದ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ!

 


 


ಮಂಗಳೂರು: ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನೇತ್ರಾವತಿ ನದಿಗೆ ವ್ಯಕ್ತಿಯೊಬ್ಬರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಗೇರುಕಟ್ಟೆಯ ಪರಪ್ಪು ನಿವಾಸಿಯಾದ ಮುತ್ತಪ್ಪ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡವರು.

 ಮುಂಜಾನೆ ಈ ವ್ಯಕ್ತಿ ಉಪ್ಪಿನಂಗಡಿಯ  ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಿಂದ ಪುತ್ತೂರು ತಾಲೂಕಿನ ಉಪ್ಪಿನಂಗಡಿಗೆ ಕೆಎಸ್‌ಆರ್‌ಟಿಸಿ ಬಸ್ಸ್‌ನಲ್ಲಿ ಬಂದು ಇಳಿದ ವ್ಯಕ್ತಿ ಕಣ್ಣಿಗೆ ಬಟ್ಟೆ ಕಟ್ಟಿ ನದಿಗೆ ಹಾರಿದ್ದಾರೆ.

ನೇತ್ರಾವತಿ ನದಿಯ ಸೇತುವೆಯ ಮೇಲಿಂದ  ಕೆಳಗೆ ಹಾರಿದನ್ನು ಗಮನಿಸಿದ ಸ್ಥಳೀಯ ನಿವಾಸಿಗಳಾದ ಸಯಾದ್‌, ಹಮ್ಜ, ರಶೀದ್‌ ಹಾಗು ಎಂಬವರು ತಕ್ಷಣವೇ ನದಿಗೆ ಹಾರಿ ರಕ್ಷಿಸಲು ಯತ್ನಿಸಿದ್ದಾರೆ. ಇವರನ್ನು ಸುಮಾರು 100ಮೀ  ದೂರದಲ್ಲಿ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿ ಆಸ್ಪತ್ರೆಗೆ ಕೊಂಡೋಯ್ದಿದ್ದಾರೆ.

 

ಆದರೆ ಅವರನ್ನು  ಆಸ್ಪತ್ರೆಗೆ ತರುವ ವೇಳೆ  ಮೃತಪಟ್ಟಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ