ಮದುವೆಯಾದ ಹತ್ತೇ ದಿನಕ್ಕೆ ವಧುವಿಗೆ ಹೊಟ್ಟೆನೋವು: ವೈದ್ಯರ ಮಾತು ಕೇಳಿ ವರ ಶಾಕ್

ಲಖನೌ: ವಿವಾಹವಾದ ಹತ್ತೇ ದಿನಕ್ಕೆ ಪತ್ನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದ ಬಳಿಕ ವೈದ್ಯರ ಮಾತು ಕೇಳಿ ಪತಿ ಭಾರೀ ಆಘಾತಕ್ಕೊಳಗಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬರೇಲಿ ಪೋರ್ಟ್​ನ ಸರೈ ಎಂಬಲ್ಲಿನ ಯುವಕ - ಯುವತಿ ಜೋಡಿ ಮದುವೆಯಾಗಿ ಕೇವಲ ಹತ್ತು ದಿನಗಳಾಗಿತ್ತು. ಇಬ್ಬರು ಕೂಡ ಒಂದೇ ಪ್ರದೇಶದವರು ಕೂಡಾ. ವರನ ಮುಖದಲ್ಲಿನ ಮದುವೆ ಕಳೆ ಇನ್ನೂ ಮಾಸಿರಲಿಲ್ಲ. ಅಷ್ಟರಲ್ಲಾಗಲೇ ಇದ್ದಕ್ಕಿದ್ದಂತೆ ಪತ್ನಿ ಹೊಟ್ಟೆ ನೋವಿನಿಂದ ನರಳುತ್ತಿದ್ದಳು. 

ಆಕೆಯ ಪರಿಸ್ಥಿತಿ ಕಂಡು ಪತಿ  ಆಸ್ಪತ್ರೆಗೆ ಕರೆದೊಯ್ಯುತ್ತಾನೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ನೀವು ತಂದೆಯಾಗುತ್ತಿದ್ದೀರಾ, ನಿಮ್ಮ ಪತ್ನಿ ಗರ್ಭಿಣಿ ಎಂದು ಹೇಳಿದ್ದಾರೆ. ಪತ್ನಿ ಅಷ್ಟರಲ್ಲಾಗಲೇ ಗರ್ಭಿಣಿ ಎಂಬ ವಿಚಾರ ತಿಳಿಯುತ್ತಿದ್ದಂತೆ ನವವಿವಾಹಿತ ಅಲ್ಲಿಯೇ ಕುಸಿದುಬಿದ್ದಿದ್ದಾನೆ. 

ಇದರಿಂದ ಕೋಪಗೊಂಡ ನವ ವಿವಾಹಿತ ಪೊಲೀಸ್​ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಕುಟುಂಬದ ವಿರುದ್ಧ ದೂರು ದಾಖಲಿಸುತ್ತಾನೆ. ಮದುವೆಗೂ ಮುನ್ನ ಗರ್ಭಿಣಿ ಎಂದು ಗೊತ್ತಿದ್ದರೂ, ಅದನ್ನು ಮುಚ್ಚಿಟ್ಟು ಮದುವೆ ಮಾಡಿ ವಂಚನೆಗೈಯಲಾಗಿದೆ ಎಂದು ದೂರಿನಲ್ಲಿ ಸಂತ್ರಸ್ತ ಪತಿ ಉಲ್ಲೇಖಿಸಿದ್ದಾನೆ. 

ಆದರೆ, ಇದನ್ನು ನಿರಾಕರಿಸಿರುವ ವಿವಾಹಿತೆಯ ತಂದೆ, ತನ್ನ ಮಗಳಿಗೂ, ಅಳಿಯನಿಗೂ ಮೊದಲೇ ಪರಿಚಯವಿತ್ತು. ಆದರೆ, ಆದರೆ ಆತ ಅದನ್ನು ನಿರಾಕರಿಸುತ್ತಿದ್ದಾನೆಂದು ಆರೋಪಿಸಿದ್ದಾರೆ. ಆದರೆ ಬಸುರಿಯಾಗಿರುವ ನವ ವಿವಾಹಿತೆಗೆ ಆಕೆಯ ಸಂಬಂಧಿ ಯುವಕನ ಜೊತೆಯಲ್ಲಿ ಸಂಬಂಧವಿತ್ತು. ಆಕೆ ಆತನನ್ನೇ ಮದುವೆ ಆಗಬೇಕೆಂದು ಕೂಡಾ ಬಯಸಿದ್ದಳು. ಆದರೆ, ಆಕೆಯ ಕುಟುಂಬ ಸುಳ್ಳು ಹೇಳಿ ಆಕೆಯ ಮದುವೆ ಮಾಡಿದ್ದಾರೆಂದು ನವ ವಿವಾಹಿತನ ಕುಟುಂಬ ದೂರಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನವ ವಿವಾಹಿತೆಯನ್ನು ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu