-->
ಒತ್ತಡ ಕಡಿಮೆ ಮಾಡಲು ಪ್ರಿಯಾಂಕಾ 'ಸ್ಕೂಬಾ ಡೈವಿಂಗ್' ಮೊರೆ ಹೋಗುತ್ತಾರಂತೆ!

ಒತ್ತಡ ಕಡಿಮೆ ಮಾಡಲು ಪ್ರಿಯಾಂಕಾ 'ಸ್ಕೂಬಾ ಡೈವಿಂಗ್' ಮೊರೆ ಹೋಗುತ್ತಾರಂತೆ!

ನವದೆಹಲಿ: ಕೆಲಸದ ಒತ್ತಡ ಹೆಚ್ಚಾದಲ್ಲಿ‌ ನಿವಾರಣೆಗೆ ಒಬ್ಬೊಬ್ಬರು ಒಂದೊಂದು ಪರಿಹಾರ ಕಂಡುಕೊಳ್ಳುತ್ತಾರೆ. ಈ ಮೂಲಕ ತಮ್ಮ ಒತ್ತಡ ಕಳೆಯಲು ಪರಿಹಾರ ಮಾಡಿಕೊಳ್ಳುತ್ತಾರೆ. ಆದರೆ ನಟಿ ಪ್ರಿಯಾಂಕಾ ಚೋಪ್ರಾ ಕಂಡುಕೊಂಡ ಪರಿಹಾರವೇನು ಗೊತ್ತಾ?, ಸಮುದ್ರಾಳಕ್ಕೆ ಹೋಗುದಂತೆ ಅಂದರೆ ಅವರು ಸ್ಕೂಬಾ ಡೈವಿಂಗ್ ಮೂಲಕ ಅವರು ಒತ್ತಡ ನಿರ್ವಹಣೆ ಮಾಡಿಕೊಳ್ಳುತ್ತಾರಂತೆ. 


ಪ್ರಿಯಾಂಕ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸ್ಪೇನ್​ನಲ್ಲಿ ‘ಸಿಟಾಡೆಲ್’ ಸರಣಿಯ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭ ಸಾಕಷ್ಟು ಒತ್ತಡದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಆದ್ದರಿಂದ ಅವರು ಒತ್ತಡ ಕಡಿಮೆ ಮಾಡಿಕೊಳ್ಳಲು, ಇತ್ತೀಚೆಗೆ ತಮ್ಮ ತಂಡದವರೊಂದಿಗೆ ಸ್ಕೂಬಾ ಡೈವಿಂಗ್​ಗೆ ಹೋಗಿದ್ದಾರೆ.


ಈ ಮೂಲಕ ಸಮುದ್ರದೊಳಗೆ ಹಲವು ಸಮಯ ಕಳೆದಿದ್ದಾರಂತೆ. ಈ  ಫೋಟೋಗಳನ್ನು ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಅದೊಂದು ಅದ್ಭುತ ಅನುಭವ ಎಂದು ಬಣ್ಣಿಸಿದ್ದಾರೆ.

Ads on article

Advertise in articles 1

advertising articles 2

Advertise under the article