ಖಡಕ್ ಕಮೆಂಟ್ಸ್ ಮೂಲಕ ನೆಟ್ಟಿಗನ ಪೋಸ್ಟ್ ಡಿಲಿಟ್ ಮಾಡಿಸಿದ ನಟಿ ರಶ್ಮಿಕಾ ಮಂದಣ್ಣ

ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ರಶ್ಮಿಕಾ ಮಂದಣ್ಣಗೆ ಸಾಕಷ್ಟು ಫಾಲೋವರ್ಸ್ ಗಳಿದ್ದಾರೆ‌. ಅದೇ ರೀತಿ ಅವರ ಕಾಲೆಳೆಯುವವರೂ ಇದ್ದಾರೆ. 
ಆದ್ದರಿಂದಲೇ ರಶ್ಮಿಕಾ ಸಾಕಷ್ಟು ಬಾರಿ ಟ್ರೋಲ್ ಆಗಿಯೂ ಇದ್ದಾರೆ.

ಈ ಹಿಂದೆ ರಶ್ಮಿಕಾ ಮಂದಣ್ಣ ಯಾರಿಗೂ ಕಮೆಂಟ್ಸ್ ಮಾಡದೇ ತಮ್ಮ ಕೆಲಸದ ಬಗ್ಗೆ ಗಮನಕೊಡುತ್ತಿದ್ದರು. ಆದರೆ ಇತ್ತೀಚೆಗೆ ಅವರು ಟ್ರೋಲಿಗನೊಬ್ಬನ ಪೋಸ್ಟ್ ಗೆ ಖಡಕ್ ಕಮೆಂಟ್ ಮಾಡಿ ಆತ ಕೆಲವೇ ಕ್ಷಣಗಳಲ್ಲಿ ಪೋಸ್ಟ್ ಡಿಲಿಟ್ ಮಾಡುವಂತೆ  ಮಾಡಿದ್ದಾರೆ. 

ಹಾಗಾದರೆ ಆತ ಅಂತದ್ದೇನು ಪೋಸ್ಟ್ ಮಾಡಿದ್ದಾರೆಂದರೆಂದು ನೋಡಿದರೆ, 'ಟಾಲಿವುಡ್‌ನವರು ಪದೇ ಪದೆ ರಶ್ಮಿಕಾರನ್ನೇ ಏಕೆ ಆಯ್ಕೆ ಮಾಡ್ಕೋತಾರೋ ಏನೋ..’ ಎಂದು ವ್ಯಂಗ್ಯವಾಗಿ ಹೇಳಿದ್ದಾನೆ. ಇದಕ್ಕೆ ರಶ್ಮಿಕಾ ‘ನನ್ನ ನಟನೆ ನೋಡಿ ಆಯ್ಕೆ ಮಾಡುತ್ತಾರೆ’ ಎಂದು ಖಡಕ್ ಕಮೆಂಟ್ಸ್ ಮಾಡಿದ್ದಾರೆ. ರಶ್ಮಿಕಾ ಇಷ್ಟು ಹೇಳುವಂತೆ ಅವರ ನೂರಾರು ಹಿಂಬಾಲಕರು ಅವರ ಪರವಾಗಿ ನಿಂತಿದ್ದಾರೆ. ಬಳಿಕ ಟ್ರೋಲಿಗ ತನ್ನ ಕಮೆಂಟ್‌ನ್ನು ಡಿಲೀಟ್ ಮಾಡಿದ್ದಾನೆ. ಇತ್ತೀಚೆಗೆ ರಶ್ಮಿಕಾ ಟ್ರೋಲಿಗರಿಗೆ ಉತ್ತರ ಕೊಡೋ ಬಗೆಯನ್ನು ಚೆನ್ನಾಗಿಯೇ ಅರಿತುಕೊಂಡಿದ್ದಾರೆ.