-->
ತಂದೆಯಾಗುವ ಬಯಕೆ ಬಿಚ್ಚಿಟ್ಟ ರಣವೀರ್ ಸಿಂಗ್ ಗೆ ದೀಪಿಕಾರಂತಿರುವ ಕ್ಯೂಟ್ ಬೇಬಿ ಬೇಕಂತೆ

ತಂದೆಯಾಗುವ ಬಯಕೆ ಬಿಚ್ಚಿಟ್ಟ ರಣವೀರ್ ಸಿಂಗ್ ಗೆ ದೀಪಿಕಾರಂತಿರುವ ಕ್ಯೂಟ್ ಬೇಬಿ ಬೇಕಂತೆ

ಮುಂಬೈ: ಬಾಲಿವುಡ್​ ನ ತಾರಾಜೋಡಿ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್​ ಸಿಂಗ್​ ಒಂದಷ್ಟು ಸದ್ದು ಮಾಡುತ್ತಿರುವ ಜೋಡಿ. ಇದೀಗ ರಣವೀರ್​ ಸಿಂಗ್​ ಅವರು ಅಪ್ಪನಾಗುವ ತಮ್ಮ ಬಯಕೆಯನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ದೀಪಿಕಾ ಸಣ್ಣವರಿರುವಾಗ ಇದ್ದಂತಹ ಕ್ಯೂಟ್​ ಹೆಣ್ಣು ಮಗು ಹುಟ್ಟಿದ್ದಲ್ಲಿ ತಮ್ಮ ಲೈಫ್​ ಸೆಟ್​ ಆದಂತೆ ಎಂದು ಹೇಳಿಕೊಂಡಿದ್ದಾರೆ. 

ಕಲರ್ಸ್​ ಚ್ಯಾನೆಲ್ ನಲ್ಲಿ ಹೊಸದಾಗಿ ಆರಂಭವಾಗಿರುವ ‘ದ ಬಿಗ್ ಪಿಚ್ಚರ್​’ ಕ್ವಿಜ್​ ಶೋನಲ್ಲಿ ಹೋಸ್ಟ್​ ಆಗಿ ನಟ ರಣವೀರ್​ ಸಿಂಗ್​ ಕಿರುತೆರೆ ಪ್ರವೇಶಿಸಿದ್ದಾರೆ. ಶನಿವಾರ ಆರಂಭವಾಗಿರುವ ಈ ಶೋನ ಪ್ರೋಮೋ ವೀಡಿಯೋದಲ್ಲಿ ಅವರು​, ಸ್ಟುಡಿಯೋ ಆಡಿಯನ್ಸ್​ ಜೊತೆ ಲೋಕಾಭಿರಾಮವಾಗಿ ಮಾತನಾಡಿದ್ದಾರೆ. ಅವರು ಮಾತನಾಡುತ್ತಾ, “ನಿಮಗೆ ಗೊತ್ತಿರುವಂತೆ ನನಗೆ ವಿವಾಹವಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಮಗೂ ಮಕ್ಕಳಾಗುತ್ತವೆ” ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ “ನಿಮ್ಮ ಬಾಭಿಯ(ದೀಪಿಕಾ) ಸಣ್ಣಕ್ಕಿರುವ ಫೋಟೋಗಳನ್ನು ನೀವು ನೋಡಬೇಕು. ಎಷ್ಟು ಕ್ಯೂಟ್​ ಬೇಬಿ ಆಗಿದ್ದಳು. ಆ ತರಹದ ಕ್ಯೂಟ್ ಬೇಬಿ ಸಿಕ್ಕರೆ ನನ್ನ ಜೀವನ ಸೆಟ್​ ಆದಂತೆ” ಎಂದಿದ್ದಾರೆ.

ಅಲ್ಲದೆ ರಣವೀರ್​, ತಾವು ಮಗುವಿನ ಹೆಸರುಗಳ ಪಟ್ಟಿ ಮಾಡುತ್ತಿದ್ದು, ಕ್ವಿಜ್​ ಅಭ್ಯರ್ಥಿಯೋರ್ವ ಹೇಳಿರುವ ‘ಶೌರ್ಯ ವೀರ್​ ಸಿಂಗ್​’ ಎಂಬ ಹೆಸರನ್ನು ಆ ಪಟ್ಟಿಗೆ ಸೇರಿಸಿಕೊಳ್ಳುವುದಾಗಿಯೂ ಹೇಳಿದ್ದಾರೆ. 

Ads on article

Advertise in articles 1

advertising articles 2

Advertise under the article