-->

ಮಂಗಳೂರು- ಅಪ್ಪನ ಗುಂಡೇಟಿಗೆ ಬಲಿಯಾದ ಮಗ- ಆರೋಪಿ ತಂದೆಗೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ!    (VIDEO)

ಮಂಗಳೂರು- ಅಪ್ಪನ ಗುಂಡೇಟಿಗೆ ಬಲಿಯಾದ ಮಗ- ಆರೋಪಿ ತಂದೆಗೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ! (VIDEO)

 

 

ಮಂಗಳೂರು: ಅಪ್ಪನ ಗುಂಡೇಟಿಗೆ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರೀಯವಾಗಿ ಸಾವನ್ನಪ್ಪಿದ ಮಗನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ನ್ಯಾಯಾಲಯ ಅವಕಾಶ ನೀಡಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.

 


ಅಕ್ಟೋಬರ್ 5 ರಂದು ಸಂಜೆ  ಮಂಗಳೂರಿನ ಮೋರ್ಗನ್ ಗೆಟ್ ನ ವೈಷ್ಣವಿ ಕಾರ್ಗೋ ಪ್ರೈ ಲಿಮಿಟೆಡ್ ಕಚೆರಿಯ ಗೆಟ್ ಬಳಿ ನಡೆದ ಗಲಾಟೆಯ ವೇಳೆ ಉದ್ಯಮಿ, ವೈಷ್ಣವಿ ಕಾರ್ಗೋ ಪ್ರೈವೆಟ್ ಲಿಮಿಟೆಡ್ ನ ಮಾಲೀಕ ರಾಜೇಶ್ ಪ್ರಭು ಹಾರಿಸಿದ ಗುಂಡು ಅವರ ಮಗ ಸುಧೀಂದ್ರ ನಿಗೆ ಬಿದ್ದು ಗಂಭಿರವಾಗಿ ಗಾಯಗೊಂಡಿದ್ದ. ಅವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಗಂಭಿರ ಗಾಯಗೊಂಡಿದ್ದ ಬಾಲಕನ ಮೆದುಳು ನಿಷ್ಕ್ರೀಯಗೊಂಡಿತ್ತು.

 

ಕಾರ್ಮಿಕರಿಬ್ಬರು ವೇತನ ಕೇಳಿದ ಸಂದರ್ಭದಲ್ಲಿ ನಡೆದ ಗೊಂದಲದ ವೇಳೆಯಲ್ಲಿ  ಕಚೇರಿಯ ಹಿಂಭಾಗದಲ್ಲಿದ್ದ  ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ತನ್ನ ಮಗ ಸುಧೀಂದ್ರನೊಂದಿಗೆ ಬಂದಿದ್ದರು. ಈ ವೇಳೆ ಸುಧೀಂದ್ರ ಕಾರ್ಮಿಕರಿಗೆ ಹಲ್ಲೆಯನ್ನು ಮಾಡಿದ್ದ. ಇದೇ ವೇಳೆ ಕೋಪಭರಿತನಾಗಿದ್ದ ರಾಜೇಶ್ ಪ್ರಭು ತನ್ನ ಕಿಸೆಯಲ್ಲಿದ್ದ ಪಿಸ್ತೂಲ್ ತೆಗೆದು ಎರಡು ರೌಂಡ್ ಫೈರಿಂಗ್ ಮಾಡಿದ್ದರು.  ಈ ಫೈರಿಂಗ್ ವೇಳೆ ಒಂದು ಗುಂಡು ಅವರ ಮಗನ ತಲೆಗೆ ಬಿದ್ದು , ಮಗ ಗಂಭೀರ ಗಾಯಗೊಂಡಿದ್ದ.

 

ಆರೋಪಿ ತಂದೆ ರಾಜೇಶ್ ಪ್ರಭುವನ್ನು ಪೊಲಿಸರು ನಿನ್ನೆ ಬಂಧಿಸಿದ್ದರು. ಈ ವೇಳೆ ಆರೋಪಿ ಪರ ವಕೀಲರು ಆರೋಪಿ ರಾಜೇಶ್ ಪ್ರಭು ಮಗ ಮೆದುಳು ನಿಷ್ಕ್ರೀಯಗೊಂಡಿರುವುದರಿಂದ ಆತ ಸಾವನ್ನಪ್ಪಿದ್ದರೆ ಅಂತ್ಯಕ್ರೀಯೆಯಲ್ಲಿ ಭಾಗಿಯಾಗಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. 



ಆರೋಪಿಯನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ ನ್ಯಾಯಾಲಯ ಒಂದು ವೇಲೆ ಪುತ್ರ ಸುಧೀಂದ್ರ ಸಾವು ಸಂಭವಿಸಿದರೆ ಅಂತ್ಯಕ್ರೀಯೆಯೆಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಸೂಚಿಸಿ ಆದೇಶ ಹೊರಡಿಸಿದೆ .

 

ಈ ಹಿನ್ನೆಲೆಯಲ್ಲಿ ಇಂದು ಸುಧೀಂದ್ರ ಸಾವನ್ನಪ್ಪಿರುವುದರಿಂದ ಆರೋಪಿ ತಂದೆಗೆ ಮಗನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.




Ads on article

Advertise in articles 1

advertising articles 2

Advertise under the article