-->
ಪುತ್ತೂರಿನಲ್ಲಿ ಸಿಡಿಲಿನ ಆರ್ಭಟ-  ಕೃಷಿಕ ಮೃತ್ಯು

ಪುತ್ತೂರಿನಲ್ಲಿ ಸಿಡಿಲಿನ ಆರ್ಭಟ- ಕೃಷಿಕ ಮೃತ್ಯುಪುತ್ತೂರು: ಪುತ್ತೂರಿನಲ್ಲಿ ಸಿಡಿಲಿನ ಆರ್ಭಟಕ್ಕೆ  ಕೃಷಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.


ದರ್ಬೆತ್ತಡ್ಕ ನಿವಾಸಿ ಕೃಷಿಕ ಪುರುಷೋತ್ತಮ ಪೂಜಾರಿ(47) ಸಾವನ್ನಪ್ಪಿದವರು. ಶುಕ್ರವಾರ ಸಂಜೆ 
 ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಎಂಬಲ್ಲಿ ಈ ಘಟನೆ ನಡೆದಿದೆ. 

ಪುರುಷೋತ್ತಮ ಪೂಜಾರಿ ಅವರು ಶುಕ್ರವಾರ ಸಂಜೆ ಮನೆಯೊಳಗಿದ್ದ ವೇಳೆ ಸಿಡಿಲು ಅವರ ದೇಹಕ್ಕೆ ಬಡಿದಿದೆ. ಇದರಿಂದ ಅವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದು ತಕ್ಷಣ ಅವರನ್ನು  ಪುತ್ತೂರು ಆಸ್ಪತ್ರೆಗೆ ಕರೆದೊಯ್ದಲಾಗಿತ್ತು.  ಆ ವೇಳೆ ಪುರುಷೋತ್ತಮ ಪೂಜಾರಿ ಅವರು ಮೃತಪಟ್ಟಿದ್ದರು.

ಪುರುಷೋತ್ತಮ ಪೂಜಾರಿ ಅವರು ಪತ್ನಿ , ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸುಳ್ಯ ಮೂಲದವರಾಗಿರುವ ಪುರುಷೋತ್ತಮ ಪೂಜಾರಿ ದರ್ಬೆತಡ್ಕದಿಂದ ವಿವಾಹವಾಗಿದ್ದು ಇಲ್ಲಿಯೇ ವಾಸವಾಗಿದ್ದರು. ಘಟನೆಯಿಂದ ಮನೆಗೂ ಹಾನಿ ಸಂಭವಿಸಿದೆ.

Ads on article

Advertise in articles 1

advertising articles 2

Advertise under the article