'ಮತ್ತೆ ಹುಟ್ಟಿಬಾ ಅಪ್ಪು' ಎಂಬ ಕಣ್ಣೀರ ಘೋಷಣೆ ನಡುವೆ ಕಾಣದಂತೆ ಮಾಯವಾದ ಪುನೀತ್ ರಾಜ್‍ಕುಮಾರ್ ಅಂತ್ಯ ಕ್ರಿಯೆ


ಬೆಂಗಳೂರು: ಕನ್ನಡದ ಖ್ಯಾತ ನಟ ಅಭಿಮಾನಿಗಳ ಪಾಲಿನ  'ಅಪ್ಪು'  ಪುನೀತ್ ರಾಜಕುಮಾರ್ ಅಂತ್ಯಕ್ರೀಯೆ ಇಂದು ಮುಂಜಾನೆ ನಡೆಯಿತು.

'ಮತ್ತೆ ಹುಟ್ಟಿಬಾ ಅಪ್ಪು' ಎಂಬ ಅಭಿಮಾನಿಗಳ ಕಣ್ಣೀರ ಘೋಷಣೆ ನಡುವೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ವರನಟ ದಿ.ಡಾ.ರಾಜ್ ಕುಮಾರ್‌ ಅವರ ಸ್ಮಾರಕದ ಬಳಿಯೆ ಪುನಿತ್ ರಾಜ್ ಕುಮಾರ್ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಅಪ್ಪು ಅವರ ಅಂತಿಮ ವಿಧಿವಿಧಾನಗಳನ್ನು ಈಡಿಗ ಸಂಪ್ರದಾಯದಂತೆ  ನೆರವೇರಿಸಲಾಯಿತು. ವಿನಯ್ ರಾಜಕುಮಾರ್ ಅಂತಿಮ ವಿಧಿವಿಧಾನವನ್ನು ನೆರವೇರಿಸಿದ್ದು ಪುನಿತ್ ರಾಜ್ ಕುಮಾರ್ ಅವರ ಪತ್ನಿ, ಮಕ್ಕಳು, ಸಹೋದರ  ಶಿವರಾಜಕುಮಾರ್, ರಾಘವೇಂದ್ರ ರಾಜ್‌ ಕುಮಾರ್ ಸೇರಿದಂತೆ ಕುಟುಂಬ ವರ್ಗ ಬಿಕ್ಕಿ ಬಿಕ್ಕಿ ಕಣ್ಣೀರು ಸುರಿಸಿದರು.

 ಕಂಠೀರವ ಸ್ಟುಡಿಯೋದ ಆವರಣದಲ್ಲೆಡೆ 'ಮತ್ತೆ ಹುಟ್ಟಿಬಾ ಅಪ್ಪು' ಎಂಬ ಕಣ್ಣೀರ ಘೋಷಣೆಗಳು ಮುಗಿಲುಮುಟ್ಟಿದ್ದವು