-->
ರಾಹುಲ್ ಗಾಂಧಿ ಓರ್ವ ಮಾದಕದ್ರವ್ಯ ವ್ಯಸನಿ: ವಿವಾದಾತ್ಮಕ ಹೇಳಿಕೆ ನೀಡಿದ‌ ನಳಿನ್ ಕುಮಾರ್ ಕಟೀಲು

ರಾಹುಲ್ ಗಾಂಧಿ ಓರ್ವ ಮಾದಕದ್ರವ್ಯ ವ್ಯಸನಿ: ವಿವಾದಾತ್ಮಕ ಹೇಳಿಕೆ ನೀಡಿದ‌ ನಳಿನ್ ಕುಮಾರ್ ಕಟೀಲು

ಹುಬ್ಬಳ್ಳಿ: ರಾಹುಲ್ ಗಾಂಧಿ ಓರ್ವ ಮಾದಕದ್ರವ್ಯ ವ್ಯಸನಿ, ಡ್ರಗ್ ಪೆಡ್ಲರ್ ಎಂಬ ವರದಿಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಆಯೋಜನೆ ಮಾಡಿರುವ ವಿಧಾನಸಭೆ ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲು ಅವರು, ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು ಜೈಲಿಗೆ ಹೋಗಿ ಬಂದವರು. ರಾಜ್ಯದ ಕಾಂಗ್ರೆಸ್ ಅಧ್ಯಕ್ಷರೂ ಜೈಲಿಗೆ ಹೋದವರು. ಇವರೇನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿರೋದಾ‌. ಅಲ್ಲ ಸ್ವಾತಂತ್ರ್ಯ ಸಂಗ್ರಾಮದ ಕಥೆ ಬರೆಯಲು ಜೈಲಿಗೆ ಹೋದವರೇ. ಇಂಥವರೆಲ್ಲಾ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ದೇಶದ ಸಂವಿಧಾನದ ಮೇಲೆ ಕಾಂಗ್ರೆಸ್ ‌ನಂಬಿಕೆ ಕಳಕೊಂಡಿದೆ.‌ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ಮಧ್ಯೆಯೇ ಪೈಪೋಟಿ ಇದೆ. ಇವರಿಗೆ ಸರಿಯಾಗಿ ಪಕ್ಷ ನಡೆಸಲೇ ಆಗುತ್ತಿಲ್ಲ. ಇದರ ಮಧ್ಯೆ ದೇಶ ನಡೆಸಲು ಸಾಧ್ಯವೇ ಎಂದು ನಳಿನ್ ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರುಗಳನ್ನು ಜೋಡೆತ್ತು ಎಂದು ಹೇಳಲಾಗುತ್ತದೆ. ಆದರೆ, ಇವರ ಸ್ಥಿತಿ ಹೇಗಿದೆಯಂದರೆ  ಒಳಗೊಳಗೇ ಕುಸ್ತಿ ಆಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಪಿಸುಮಾತಿನಲ್ಲಿಯೇ ಇವರಿಬ್ಬರ ಒಳಜಗಳ ಜಗಜ್ಜಾಹಿರವಾಗಿದೆ. ಉಗ್ರಪ್ಪ ಎಂದೂ ಪಿಸುಮಾತು ಆಡಿದವರಲ್ಲ. ಆದರೆ, ಸಿದ್ದರಾಮಯ್ಯರ ಕುತಂತ್ರದಿಂದಾಗಿ ಉಗ್ರಪ್ಪನವರೂ ಪಿಸುಮಾತು ಆಡುವಂತಾಗಿದೆ. ಇವರುಗಳು ಮುಂದಿನ ಚುನಾವಣೆ ಸಮಯಕ್ಕೆ ಪಕ್ಷವನ್ನು ಗೆಲ್ಲಿಸುವುದಲ್ಲ, ಪಕ್ಷವನ್ನೇ ಎರಡು ಹೋಳಾಗಿ ವಿಭಜಿಸಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲು ಅವರು ಹೇಳಿದರು.

Ads on article

Advertise in articles 1

advertising articles 2

Advertise under the article