-->
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುವನೆಂದು ಪ್ರಿಯಕರನೊಂದಿಗೆ ಸೇರಿ ಪುತ್ರನನ್ನೇ ಕೊಲ್ಲಿಸಿದಳು ಮಹಾತಾಯಿ!

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುವನೆಂದು ಪ್ರಿಯಕರನೊಂದಿಗೆ ಸೇರಿ ಪುತ್ರನನ್ನೇ ಕೊಲ್ಲಿಸಿದಳು ಮಹಾತಾಯಿ!

                        ಆರೋಪಿ ಶಕ್ತಿವೇಲ್

ಬೆಂಗಳೂರು: ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಹುಟ್ಟುಬಹುದು ಆದರೆ ಕೆಟ್ಟ ತಾಯಿ ಹುಟ್ಟಲು ಸಾಧ್ಯವಿಲ್ಲ ಎಂದು ಮಹಾನ್ ಪುರುಷರೊಬ್ಬರು ಹೇಳಿದ್ದಾರೆ‌. ಆದರೆ ಇಲ್ಲೊಬ್ಬಳು ಮಹಾತಾಯಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುವನೆಂದು ಪುತ್ರನನ್ನೇ ಪ್ರಿಯಕರನಿಗೆ ಕುಮ್ಮಕ್ಕು ನೀಡಿ ಕೊಲ್ಲಿಸಿದ್ದಾಳೆ. ಇದೀಗ ಇಬ್ಬರೂ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ‌.

ಹಲಸೂರಿನ ಮರ್ಫಿ ಟೌನ್​ ನಿವಾಸಿ  ನಂದು(17) ಕೊಲೆಗೀಡಾದ ಬಾಲಕ. ಕೊಲೆ ಆರೋಪದ ಹಿನ್ನೆಲೆಯಲ್ಲಿ 35 ವರ್ಷದ ಮಹಿಳೆ ಮತ್ತು ಆಕೆಯ ಪ್ರಿಯಕರ ಶಕ್ತಿವೇಲ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಆರೋಪಿತೆಯು ಮನೆಗೆಲಸ‌ ಮಾಡಿಕೊಂಡು ತನ್ಯ ಮಗನೊಂದಿಗೆ ಜೀವನ ನಡೆಸುತ್ತಿದ್ದಾಳೆ. ಆರು ವರ್ಷಗಳಿಂದ ಆಕೆ ಪತಿಯಿಂದ ದೂರವಾಗಿದ್ದಾಗಿ ತಿಳಿದು ಬಂದಿದೆ. ಆ ಬಳಿಕ ಆಕಸಗೆ ಫೇಸ್​ಬುಕ್​ನಲ್ಲಿ ಆಟೋ ಚಾಲಕ ಶಕ್ತಿವೇಲು ಎಂಬಾತ​ನ ಪರಿಚಯವಾಗಿದೆ. ಬಳಿಕ ಇಬ್ಬರ ನಡಯವೆ ಸಲಿಗೆ ಬೆಳೆದು, ಇಬ್ಬರ ನಡುವೆ ವಿವಾಹೇತರ ಸಂಬಂಧ ಬೆಳೆದುದೆ. 

ತಾಯಿ, ಮಗ ನಂದು ಹಾಗೂ ಶಕ್ತಿವೇಲ್​ ಮನೆಯಲ್ಲಿಯೇ ಇದ್ದ ಸಂದರ್ಭ ತಾಯಿಯ ಅಕ್ರಮ ಸಂಬಂಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ಸಂದರ್ಭ ಪಾನಮತ್ತನಾಗಿದ್ದ ಶಕ್ತಿವೇಲು ಬಾಲಕ ನಂದುವಿನ ಹೊಟ್ಟೆ-ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅದಕ್ಕೆ ತಾಯಿಯೂ ಕುಮ್ಮಕ್ಕು ನೀಡಿದ್ದಾಳೆ. 

ಈ ವಿಚಾರ ಮಹಿಳೆಯ ಪರಿತ್ಯಕ್ತ ಪತಿಗೆ ತಿಳಿದು ಆತ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾನೆ. ಆತನ ನೀಡಿರುವ ದೂರಿನ ಮೇರೆಗೆ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article