ಓಪ್ಲೊ : ದುಷ್ಕರ್ಮಿಯೋರ್ವ ಬಿಲ್ಲು ಬಾಣಗಳಿಂದ ಐವರನ್ನು ಹತ್ಯೆ ಮಾಡಿರುವ ಅಪರೂಪದ ಘಟನೆ ನಾರ್ವೆಯ ಕೊಂಗ್ಸ್‌ಬರ್ಗ್‌ನಲ್ಲಿ ಎಂಬಲ್ಲಿ ಬುಧವಾರ ನಡೆದಿದೆ. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಲ್ಲು ಬಾಣಗಳಿಂದ ದಾಳಿಮಾಡಿರುವ ಶಂಕಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಂಕಿತ ಆರೋಪಿ ಅಮಾಯಕರ ಮೇಲಿನ ದಾಳಿಗೆ ಬಿಲ್ಲು ಹಾಗೂ ಬಾಣಗಖನ್ನು ಅಸ್ತ್ರವಾಗಿ ಬಳಸಿದ್ದಾನೆ. ಅಲ್ಲದೆ ಇತರ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾನೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮುಖ್ಯಸ್ಥ ಓಯಿವಿಂದ್ ಆಸ್ ಹೇಳಿದ್ದಾರೆ.
ಶಂಕಿತ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಏಕಾಂಗಿಯಾಗಿ ಈ ದಾಳಿ ನಡೆಸಿದ್ದಾನೆ. ಗಾಯಗೊಂಡವರಲ್ಲಿ ಕರ್ತವ್ಯದಲ್ಲಿ ಇರದ ಓರ್ವ ಪೊಲೀಸ್ ಅಧಿಕಾರಿ ಕೂಡಾ ಸೇರಿದ್ದಾರೆ ಎನ್ನಲಾಗಿದೆ.