-->
ಓರ್ವಳಿಗಾಗಿ ಇಬ್ಬರ ನಡುವೆ ಕಾದಾಟ: ಓರ್ವನಿಗೆ ಇರಿದು ಗಾಯ

ಓರ್ವಳಿಗಾಗಿ ಇಬ್ಬರ ನಡುವೆ ಕಾದಾಟ: ಓರ್ವನಿಗೆ ಇರಿದು ಗಾಯ

ಬೆಂಗಳೂರು: ಓರ್ವಳಿಗಾಗಿ ಇಬ್ಬರು ಯುವಕರ ನಡುವಿನ ಸಂಘರ್ಷದಿಂದ ಓರ್ವನು ಚೂರಿ ಇರಿತಗೊಂಡು ಗಾಯಾಳುವಾಗಿರುವ ಘಟನೆ ನಿನ್ನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚೂರಿಯಿಂದ ಇರಿದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. 

ಮುತ್ತುರಾಜ್​ ಹಾಗೂ ಹೇಮಂತ್ ಬಂಧಿತ ಆರೋಪಿಗಳು. ಹರಿಕೀರ್ತನ್ ಎಂಬಾತ ಇರಿತಕ್ಕೊಳಗಾಗಿ ಗಾಯಗೊಂಡ ಯುವಕ.  

ವಿದ್ಯಾರ್ಥಿಯಾಗಿದ್ದ ಹರಿಕೀರ್ತನ್ ಯುವತಿಯೋರ್ವಳನ್ನು ಪ್ರೇಮಿಸುತ್ತಿದ್ದ. ಮುತ್ತುರಾಜ್ ಕೂಡಾ ಅದೇ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಇದರಿಂದ ಮುತ್ತುರಾಜ್ ಗೆ ಹರಿಕೀರ್ತನ್ ನೊಂದಿಗೆ ದ್ವೇಷ ಬೆಳೆದಿತ್ತು. ಮುತ್ತುರಾಜ್ ಆ ಯುವತಿಯನ್ನು ಭೇಟಿ ಆಗಬಾರದೆಂದು ಹರಿಕೀರ್ತನ್​ಗೆ ಎಚ್ಚರಿಕೆಯನ್ನೂ ನೀಡಿದ್ದ. ಆದರೆ ಅದನ್ನು ಲೆಕ್ಕಿಸದೆ ಹರಿಕೀರ್ತನ್​ ಯುವತಿಯನ್ನು ಭೇಟಿಯಾಗುತ್ತಿದ್ದ. 

 ಇದರಿಂದ ಸಿಟ್ಟಿಗೆದ್ದ ಮುತ್ತುರಾಜ್​ ತನ್ನ ಮಿತ್ರ ಹೇಮಂತ್ ಎಂಬಾತನೊಂದಿಗೆ ಸೇರಿ ಸುಂಕದಕಟ್ಟೆ ಬಳಿ ಬಸ್​ವೊಂದನ್ನು ಅಡ್ಡಗಟ್ಟಿ ಹರಿಕೀರ್ತನ್​ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ ಚೂರಿಯಿಂದ ಆತನ ಎದೆ ಮತ್ತಿತರ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಗಾಯಾಳು ಹರಿಕೀರ್ತನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು  ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article