ನ್ಯಾಯಾಂಗ ಇಲಾಖೆ ನಿವೃತ್ತ ಶಿರಸ್ತೆದಾರ್ ಮೋಹನ ಹೊಳ್ಳ ದುರ್ಮರಣ
ನ್ಯಾಯಾಂಗ ಇಲಾಖೆಯಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಮೋಹನ್ ಹೊಳ್ಳ ದಿನಾಂಕ 27.10.2021ರಂದು ಕೋಟೆಕಾರ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದರು.
ಹಾಸನ ಜಿಲ್ಲೆಯ ಅರಸೀಕೆರೆಯ ಮುನ್ಸಿಫ್ ನ್ಯಾಯಾಲಯ ದಲ್ಲಿ ದಿನಾಂಕ 17.4.1978 ರಂದು ಪ್ರಥಮ ದರ್ಜೆ ಸಹಾಯಕರಾಗಿ ಸೇವೆಗೆ ಮೋಹನ ಹೊಳ್ಳರು ಸೇರಿದ ರು.
ಉಡುಪಿ; ಪುತ್ತೂರು; ಬಂಟ್ವಾಳ ಮತ್ತು ಮಂಗಳೂರಿನ ನ್ಯಾಯಾಲಯಗಳಲ್ಲಿ ಬೆಂಚ್ ಕ್ಲರ್ಕ್ ಹಾಗೂ ಶಿರಸ್ತೆದಾರ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದಿನಾಂಕ 30.6.2014 ರಂದು ಸೇವೆಯಿಂದ ವಯೋನಿವೃತ್ತಿ ಹೊಂದಿದರು.
ನಿವೃತ್ತಿಯ ಬಳಿಕ ಮಂಗಳೂರು ತಾಲ್ಲೂಕಿನ ಸೋಮೇಶ್ವರದ ತಮ್ಮ ಸ್ವಗೃಹದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಮಧ್ಯಾಹ್ನ ಕೋಟೆಕಾರ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯನ್ನು ದಾಟುತ್ತಿರುವ ಸಮಯದಲ್ಲಿ ಅತಿ ವೇಗದಿಂದ ಬರುತ್ತಿದ್ದ ಮೋಟಾರ್ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಅಸುನೀಗಿದರು. ಮೃತರು ಪತ್ನಿ ಹಾಗೂ ಇಬ್ಬರು ವಿವಾಹಿತ ಪುತ್ರಿಯರನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.
