-->
ಸುರತ್ಕಲ್ ನಲ್ಲಿ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಸೆಗಣಿ ಹಚ್ಚಿದ ವ್ಯಕ್ತಿ ಪತ್ತೆ- ಆತ ಯಾರು ಗೊತ್ತಾ?

ಸುರತ್ಕಲ್ ನಲ್ಲಿ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಸೆಗಣಿ ಹಚ್ಚಿದ ವ್ಯಕ್ತಿ ಪತ್ತೆ- ಆತ ಯಾರು ಗೊತ್ತಾ?

 

 


 

ಮಂಗಳೂರು:  ಸುರತ್ಕಲ್ ನ ಗೋವಿಂದದಾಸ್ ಕಾಲೇಜಿನ ಬಳಿ ಬಿಜೆಪಿ ವತಿಯಿಂದ ಹಾಕಲಾಗಿದ್ದ ಬ್ಯಾನರ್ ನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಸೆಗಣಿ  ಮತ್ತು ಕೆಸರನ್ನು ಬಳಿದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

 

ಅಕ್ಟೋಬರ್ 2 ರಂದು ತಡರಾತ್ರಿ ಸುರತ್ಕಲ್ ಗೋವಿಂದ ದಾಸ ಕಾಲೇಜ್ ಬಳಿ ಬಿಜೆಪಿ ವತಿಯಿಂದ ಹಾಕಲಾಗಿದ್ದ ಬ್ಯಾನರ್ ನಲ್ಲಿದ್ದ  ಪ್ರಧಾನ ಮಂತ್ರಿಗಳ ಭಾವಚಿತ್ರಕ್ಕೆ ಸಗಣಿ ಹಾಗೂ ಕೆಸರನ್ನು ಬಳಿಯಲಾಗಿತ್ತು.

 

 ಈ ಬಗ್ಗೆ  ಸುರತ್ಕಲ್ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ.
 

ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ  ಓರ್ವ ಮಾನಸಿಕ ಅಸ್ವಸ್ಥ ವ್ಯಕ್ತಿ ಈ ಕೃತ್ಯ ಎಸಗಿರುವುದು ಕಂಡು ಬಂದಿತ್ತು.  ಪೊಲೀಸರು ಈ ವ್ಯಕ್ತಿಯನ್ನು  ಇಂದು ಪತ್ತೆ ಹಚ್ಚಿದಾಗ ಆತನು ಸಂಪೂರ್ಣ ವಾಗಿ ಮಾನಸಿಕ ಅಸ್ವಸ್ಥನಾಗಿರುವ ಬಗ್ಗೆ ತಿಳಿದುಬಂದಿದೆ.

 

 ಈ ಬಗ್ಗೆ ಮಂಗಳೂರು ಉತ್ತರ  ಎಪಿಪಿ ಹಾಗೂ  ನ್ಯಾಯಾಧೀಶರನ್ನು ಸಂಪರ್ಕಿಸಿ  ಪೊಲೀಸರು ಮಾಹಿತಿ ನೀಡಿದ್ದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಅವಶ್ಯಕತೆ ಇಲ್ಲವೆಂದು ತಿಳಿಸಿರುತ್ತಾರೆ.  

 

ಆತನ ಪ್ರಸ್ತುತ ಸ್ಥಿತಿಯ ವಿಡಿಯೋ ಈ ರೀತಿ ಇದೆ. 

 

Ads on article

Advertise in articles 1

advertising articles 2

Advertise under the article