-->
ಬಾಲಿವುಡ್‌ ಅಂಗಳದಲ್ಲಿ ಎರಡು ನಟ-ನಟಿ ಜೋಡಿಗಳ ಮದುವೆಯಂತೆ ಹೌದೇ: ಇದರಲ್ಲಿ ಸುಳ್ಳೆಷ್ಟು ನಿಜವೆಷ್ಟು?

ಬಾಲಿವುಡ್‌ ಅಂಗಳದಲ್ಲಿ ಎರಡು ನಟ-ನಟಿ ಜೋಡಿಗಳ ಮದುವೆಯಂತೆ ಹೌದೇ: ಇದರಲ್ಲಿ ಸುಳ್ಳೆಷ್ಟು ನಿಜವೆಷ್ಟು?

ಮುಂಬೈ: ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಜೋಡಿ ಡಿಸೆಂಬರ್​ನಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೊಂದು ಹಲವು ದಿನಗಳ ಹಿಂದೆ ಕೇಳಿಬಂದಿತ್ತು. ಅದು ನಿಜವೋ ಸುಳ್ಳೋ ಇನ್ನೂ ಗೊತ್ತಿಲ್ಲ. ಈ ನಡುವೆ ಮತ್ತೊಂದು ಜೋಡಿ ಇದೇ ಡಿಸೆಂಬರ್ ವೇಳೆಗೆ ಮದುವೆಯಾಗಲಿದೆ ಎಂಬ ಸುದ್ದಿ ಮುನ್ನೆಲೆಗೆ ಬಂದಿದೆ‌.

ಹೌದು ವಿಕ್ಕಿ ಕೌಶಾಲ್ ಮತ್ತು ಕತ್ರಿನಾ ಕೈಫ್ ಸಹ ಇದೇ ಡಿಸೆಂಬರ್ ನಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಎರಡು ದಿನಗಳಿಂದ​ ಈ ಎರಡು ಜೋಡಿಗಳ ಮದುವೆಯದ್ದೇ ದೊಡ್ಡ ಸುದ್ದಿಯಾಗಿಬಿಟ್ಟಿದೆ.

ಮೂಲಗಳ ಪ್ರಕಾರ, ಎರಡೂ ಜೋಡಿಗಳು ಮದುವೆಯೂ ರಾಜಸ್ಥಾನದಲ್ಲಿ ನಡೆಯಲಿವೆಯಂತೆ. ಈ ಪೈಕಿ ಕತ್ರಿನಾ - ವಿಕ್ಕಿ ಕೌಶಾಲ್ ಜೋಡಿಯ ವಿವಾಹ ಸವಾಯಿ ಮಾಧೋಪುರದ ಬರ್ವಾರ ಕೋಟೆಯಲ್ಲಿ ನಡೆದರೆ, ಆಲಿಯಾ ಭಟ್ - ರಣಬೀರ್ ಕಪೂರ್ ಮದುವೆ ಉದಯಪುರದ ದೊಡ್ಡ ಅರಮನೆಯಲ್ಲಿ ನಡೆಯಲಿದೆಯಂತೆ. ಅಷ್ಟೇ ಅಲ್ಲದೆ ಕತ್ರಿನಾ ಮತ್ತು ವಿಕ್ಕಿ ಕೌಶಾಲ್ ಇಬ್ಬರೂ ಮದುವೆ ದಿನ ಸಬ್ಯಸಾಚಿ ಮುಖರ್ಜಿ ಡಿಸೈನ್ ಮಾಡಿರುವ ಬಟ್ಟೆಗಳನ್ನು ತೊಡುತ್ತಾರಂತೆ‌. ಅದೇ ರೀತಿ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿರುವ ಬಟ್ಟೆಗಳನ್ನು ರಣವೀರ್ - ಆಲಿಯಾ ಭಟ್ ತೊಡಲಿದ್ದಾರೆಂಬ ವಿಚಾರಗಳೂ ಕೇಳಿ ಬರುತ್ತಿದೆ.


ಇಷ್ಟೆಲ್ಲಾ ಮಾಹಿತಿಗಳನ್ನು ಕಲೆಹಾಕಿರುವ ಮಂದಿಗೆ ವಿವಾಹದ ದಿನಾಂಕ ಬಗ್ಗೆ  ಸ್ಪಷ್ಟವಾದ ಮಾಹಿತಿಯಿಲ್ಲ. ಆದರೆ, ಈ ಎರಡೂ ಜೋಡಿಗಳು ಹಾಗೂ ಅವರ ಆಪ್ತರುಗಳು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಮುಖ್ಯವಾಗಿ ಕತ್ರೀನಾ ಕೈಫ್, ಈ ವಿಷಯದ ಬಗ್ಗೆ ಮಾತನಾಡಿ, ನಾವು ಮದುವೆಯಾಗುತ್ತಿರುವುದೇ ಸುಳ್ಳು ಸುದ್ದಿ ಎಂದಿದ್ದು, ಕಳೆದ 15 ವರ್ಷಗಳಿಂದ ಇಂಥ ಸುದ್ದಿಗಳನ್ನೆಲ್ಲಾ ನಾವು ಸಾಕಷ್ಟು ಬಾರಿ ಕೇಳಿದ್ದೇವೆ‌ ಎಂದಿದ್ದಾರೆ. 

ಇನ್ನು ಆಲಿಯಾ ಭಟ್ ಪರವಾಗಿ ಅವರ ತಾಯಿ ಸೋನಿ ರಾಜ್ದಾನ್ ಮಾತನಾಡಿ, ‘ಮದುವೆ ದಿನಾಂಕದ ಬಗ್ಗೆ ನನಗೇನೂ ತಿಳಿದಿಲ್ಲ. ಈ ವಿಚಾರದ ಬಗ್ಗೆ ಹೆಚ್ಚಿನ ವಿಷಯವನ್ನು ಮಾಧ್ಯಮದವರೇ ನಮಗೆ ತಿಳಿಸಬೇಕು’ ಎಂದು ವ್ಯಂಗ್ಯವಾಡಿದ್ದಾರೆ. 

ಇನ್ನು, ರಣಬೀರ್ ದೊಡ್ಡಪ್ಪ ರಣಧೀರ್ ಮಾತನಾಡಿ, ಈ ವಿಷಯದ ಬಗ್ಗೆ ತಮಗೇನೂ ತಿಳಿದಿಲ್ಲ ಎಂದು ಮದುವೆಯ ವಿಚಾರವನ್ನು ಅಲ್ಲಗಳೆದಿದ್ದಾರೆ.

Ads on article

Advertise in articles 1

advertising articles 2

Advertise under the article