IT Raid on BYV aide - ವಿಜಯೇಂದ್ರ ಆಪ್ತ ಸ್ನೇಹಿತನ ಮನೆ ಮೇಲೂ ಐಟಿ ದಾಳಿ!

ವಿಜಯೇಂದ್ರ ಆಪ್ತ ಸ್ನೇಹಿತನ ಮನೆ ಮೇಲೂ ಐಟಿ ದಾಳಿ!






ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತ ಉಮೇಶ್ ನಿವಾಸದ ಮೇಲೆ ಕರ್ನಾಟಕ-ಗೋವಾ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ಆಪ್ತ ಗೆಳೆಯನ ಮನೆಯ ಮೇಲೆಯೂ ಐಟಿ ದಾಳಿ ನಡೆದಿದೆ.



ಬಿ ವೈ ವಿಜಯೇಂದ್ರ ಆಪ್ತ ಹಾಗೂ ಗೆಳೆಯ ಅರವಿಂದ ಮನೆ ಮೇಲೆ ಐಟಿ ದಾಳಿ ನಿನ್ನೆ ದಾಳಿ ನಡೆದಿತ್ತು. ಅರವಿಂದ್ ಮತ್ತು ವಿಜಯೇಂದ್ರ ಒಂದೇ ತರಗತಿಯಲ್ಲಿ ಕಲಿತವರು. ವಸಂತ ನಗರದಲ್ಲಿ ವಾಸವಿರುವ ಅರವಿಂದ ಮನೆ ಮೇಲೆ ಐಟಿ ದಾಳಿ​ ನಡೆದಿತ್ತು. ಅರವಿಂದ್​ ಜಯನಗರದಲ್ಲಿ ಸ್ವಂತ ಮನೆ ಹೊಂದಿದ್ದಾರೆ.



ಹೊಸ ಮನೆ ಕಟ್ಟಲು ಯೋಜನೆ ಹಾಕಿದ್ದ ಅರವಿಂದ್ ವಸಂತ ನಗರ ಮನೆಗೆ ಸ್ಥಳಾಂತರಗೊಂಡಿದ್ದರು. ಬಳಿಕ, ಅರವಿಂದ್ ದುಬೈಗೆ ತೆರಳಿದ್ದರು. ದುಬೈನಿಂದ ಬೆಂಗಳೂರಿಗೆ ಶನಿವಾರ ವಾಪಸಾಗಿದ್ದಾರೆ. 



ವಸಂತ ನಗರದ ಅರವಿಂದ್ ಫ್ಲಾಟ್ ನಲ್ಲಿ ಅವರ ತಂದೆ ಮತ್ತು ತಾಯಿ ಇದ್ದರು. ಅರವಿಂದ ಸಮ್ಮಖದಲ್ಲಿ ಐಟಿ ಅಧಿಕಾರಿಗಳ ತಂಡ ಮನೆಯನ್ನು ಸರ್ಚ್ ಮಾಡಿದೆ.


ಯಡಿಯೂರಪ್ಪ ಹಾಗೂ ಅವರ ಸುತ್ತ ನಡೆಯುತ್ತಿರುವ ಐಟಿ ದಾಳಿಗಳು ರಾಜಕೀಯ ಬಣ್ಣವನ್ನು ಪಡೆದುಕೊಂಡಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೂ, ಬಿಜೆಪಿಯಲ್ಲಿ ಅವರ ಪ್ರಭಾವ ಕಡಿಮೆಯಾಗಿಲ್ಲ. ಹೀಗಾಗಿ ಐಟಿ ದಾಳಿಯ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

BREAKING NEWS
Loading latest news...
Join our WhatsApp Channel Powered By : Online Pudu