-->

Govt Job in Khadi Board- ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯಲ್ಲಿ ಉದ್ಯೋಗ: 29 ಹುದ್ದೆಗಳಿಗೆ ಅರ್ಜಿ ಆಹ್ವಾನ

Govt Job in Khadi Board- ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯಲ್ಲಿ ಉದ್ಯೋಗ: 29 ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯಲ್ಲಿ ಉದ್ಯೋಗ: 29 ಹುದ್ದೆಗಳಿಗೆ ಅರ್ಜಿ ಆಹ್ವಾನ






ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ 29 ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.




ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು.




ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಕ್ಟೋಬರ್ 25, 2021ರಿಂದ ನವೆಂಬರ್ 23, 2021ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.




ವಿದ್ಯಾರ್ಹತೆ:


1) ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಹುದ್ದೆಗಳಿಗೆ ಸ್ನಾತಕ ಪದವಿ,


2) ಪ್ರಥಮ ದರ್ಜೆ ಸಹಾಯಕರು ಹುದ್ದೆಗಳಿಗೆ ಪದವಿ,


3) ತಾಂತ್ರಿಕ ಮೇಲ್ವಿಚಾರಕರು ಹುದ್ದೆಗಳಿಗೆ ಬಿ.ಎಸ್ಸಿ/ಡಿಪ್ಲೋಮ


4) ತಾಂತ್ರಿಕ ಸಹಾಯಕರು ಹುದ್ದೆಗಳಿಗೆ ಐಟಿಐ



*ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಶೈಕ್ಷಣಿಕ ಅರ್ಹತೆ ಪಡೆದಿರಬೇಕು



ವಯೋಮಿತಿ: ಕನಿಷ್ಟ 18 ರಿಂದ ಸಾಮಾನ್ಯ ವರ್ಗದ ಗರಿಷ್ಟ 35 ವರ್ಷ

ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.


ವೇತನದ ವಿವರ:

1) ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಹುದ್ದೆಗೆ

ತಿಂಗಳಿಗೆ 45,300/- ರಿಂದ 88,300/-ರೂ,


2) ಪ್ರಥಮ ದರ್ಜೆ ಸಹಾಯಕರು ಹುದ್ದೆಗಳಿಗೆ

ತಿಂಗಳಿಗೆ 27,650/- ರಿಂದ 52,650/-ರೂ,


3) ತಾಂತ್ರಿಕ ಮೇಲ್ವಿಚಾರಕರು ಹುದ್ದೆಗಳಿಗೆ

ತಿಂಗಳಿಗೆ 27,650/- ರಿಂದ 52,650/-ರೂ


4) ತಾಂತ್ರಿಕ ಸಹಾಯಕರು ಹುದ್ದೆಗಳಿಗೆ

ತಿಂಗಳಿಗೆ 21,400/- ರಿಂದ 42,000/-ರೂ


ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.



ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಅಕ್ಟೋಬರ್ 25,2021


ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ನವೆಂಬರ್ 23,2021


ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : ನವೆಂಬರ್ 23,2021



ಅರ್ಜಿ ಶುಲ್ಕ:


ಸಾಮಾನ್ಯ ವರ್ಗ / ಪ್ರವರ್ಗ-2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳು 800/-ರೂ,


ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ಮಾಜಿ ಸೈನಿಕ ಅಭ್ಯರ್ಥಿಗಳು 400/-ರೂ


ಅಂಗವಿಕಲ/ದಿವ್ಯಾಂಗ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.




ಅರ್ಜಿ ಸಲ್ಲಿಕೆ : ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://khadi.karnataka.gov.in/ನಲ್ಲಿ ಕೇಳಲಾದ ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಬಹುದು.


ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ- https://khadi.karnataka.gov.in/storage/pdf-files/Notification.PDF


ಆನ್‌ಲೈನ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ-

https://cdn.digialm.com/EForms/configuredHtml/2803/68978/login.html


Khadi Borad- https://khadi.karnataka.gov.in/




Ads on article

Advertise in articles 1

advertising articles 2

Advertise under the article