-->
ಹೆಸರು ಬದಲಿಸಿಕೊಂಡ ಫೇಸ್ ಬುಕ್: ಇನ್ಮುಂದೆ ಮೆಟಾ ಎಂದು ಗುರುತಿಸಲ್ಪಡಲಿದೆ ಎಫ್ ಬಿ

ಹೆಸರು ಬದಲಿಸಿಕೊಂಡ ಫೇಸ್ ಬುಕ್: ಇನ್ಮುಂದೆ ಮೆಟಾ ಎಂದು ಗುರುತಿಸಲ್ಪಡಲಿದೆ ಎಫ್ ಬಿ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ದೈತ್ಯ ಸಂಸ್ಥೆಯಾದ ಫೇಸ್​ಬುಕ್​ ತನ್ನ ಹೆಸರು ಬದಲಾಯಿಸಿದ್ದು ಇನ್ನು ಮುಂದೆ ಮೆಟಾ (Meta) ಅನ್ನೋ ಹೆಸರಿನಿಂದ ಗುರುತಿಸಲ್ಪಡಲಿದೆ. ಗುರುವಾರ ನಡೆದ ಕಂಪನಿಯ ಈವೆಂಟ್​ನಲ್ಲಿ ಫೇಸ್​ಬುಕ್​ ಈ ನಿರ್ಧಾರವನ್ನು ಘೋಷಿಸಿದೆ.

ಕಂಪನಿಯ ಸಿಇಒ ಮಾರ್ಕ್​ ಜುಕರ್​ಬರ್ಗ್​ ಈ ಹೊಸ ಹೆಸರನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜುಕರ್​ಬರ್ಗ್​, "ನಮ್ಮದು ಸಂಪರ್ಕ ಸಾಧಿಸುವ ಉದ್ದೇಶದಿಂದ ತಂತ್ರಜ್ಞಾನ ನಿರ್ಮಿಸುವ ಕಂಪೆನಿಯಾಗಿದೆ. ಅಂತಿಮವಾಗಿ ನಾವು ಜನರನ್ನು ನಮ್ಮ ತಂತ್ರಜ್ಞಾನದ ಕೇಂದ್ರದಲ್ಲಿ  ಒಟ್ಟಾಗಿ ಇರಿಸುವುದು, ಬೃಹತ್ ಪ್ರಮಾಣದ ಆರ್ಥಿಕತೆಯನ್ನು ಅನ್​ಲಾಕ್​ ಮಾಡುವುದು ಉದ್ದೇಶವಾಗಿದೆ ಎಂದಿದ್ದಾರೆ. 

ಫೇಸ್‌ಬುಕ್ ಎಂಬ ಹೆಸರು ಇಂದು ಕಂಪೆನಿಯ ಎಲ್ಲಾ ವಿಭಿನ್ನ ವ್ಯವಹಾರಗಳನ್ನು ಸಂಪೂರ್ಣವಾಗಿ ಒಳಗೊಳ್ಳುವುದಿಲ್ಲ‌. ಅದು ಕಂಪೆನಿಯು ಉತ್ಪನ್ನಕ್ಕೆ ಮಾತ್ರ ನಿಕಟ ಸಂಬಂಧವನ್ನು ಹೊಂದಿದೆ. ಹೊಸ ಹೆಸರು ಕಂಪೆನಿಯನ್ನು ಕಾಲಾನಂತರದಲ್ಲಿ ಮೆಟಾವರ್ಸ್ ಕಂಪನಿಯಾಗಿ ಕಾಣಲು ಸಹಾಯ ಮಾಡುತ್ತದೆ ಎಂದು ಜುಕರ್‌ಬರ್ಗ್ ಹೇಳಿದರು.

ಇನ್ನು ಕಂಪೆನಿಯ ಮೊಬೈಲ್​ ಆ್ಯಪ್​ಗಳ ಹೆಸರು ಎಫ್ ಬಿ​, ಇನ್​ಸ್ಟಾಗ್ರಾಂ, ಮೆಸೆಂಜರ್​ ಹಾಗೂ ವಾಟ್ಸ್​ಆ್ಯಪ್ ಆಗಿ ಉಳಿಯಲಿದೆ ಎಂದು ಕಂಪನಿ ಹೇಳಿದೆ. ರೀಬ್ರ್ಯಾಂಡಿಂಗ್​ ಎಂಬುದು ಫೇಸ್​ಬುಕ್​ನ ಒಂದು ಅಂಶವಾಗಿದ್ದು, ಸಾಮಾಜಿಕ ಜಾಲತಾಣ ಕಂಪೆನಿ ಎಂಬ ಟ್ಯಾಗ್​ನಿಂದ ಹೊರಬರುವ ಉದ್ದೇಶದಿಂದ ಹಾಗೂ ಮೆಟಾವರ್ಸ್​ ಸೃಷ್ಟಿಸುವ ಮಾರ್ಕ್​ ಜುಕರ್​ಬರ್ಗ್​ ಯೋಜನೆಯನ್ನು ಅನುಷ್ಠಾನ ಮಾಡುವುದೇ ಹೆಸರು ಬದಲಾವಣೆಗೆ ಪ್ರಮುಖ ಕಾರಣವಾಗಿದೆ.

ಫೇಸ್ ಬುಕ್ ಕಂಪೆನಿಯ ಈ ನಡೆಯಿಂದ ಕಾರ್ಪೊರೇಟ್ ರಚನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಫೇಸ್​ಬುಕ್​ ತನ್ನ ಆರ್ಥಿಕತೆಯನ್ನು ಹೇಗೆ ವರದಿ ಮಾಡುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ ಎಂದು ಜುಕರ್​ಬರ್ಗ್ ಹೇಳಿದ್ದಾರೆ. ಅಲ್ಲದೆ, ಇಂದಿನ ಪ್ರಕಟಣೆಯು ನಾವು ಡೇಟಾವನ್ನು ಹೇಗೆ ಬಳಸುತ್ತೇವೆ ಅಥವಾ ಹಂಚಿಕೊಳ್ಳುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article