ಪುತ್ತೂರು : ಇದೆಂತಹ ಕ್ರೌರ್ಯ?-ಸಲಿಂಗ ಕಾಮಿಯಿಂದ ಎಂಡೋ ಪೀಡಿತ ಬಾಲಕನ ಅತ್ಯಾಚಾರ!

 


 

ಮಂಗಳೂರು: ಪುತ್ತೂರಿನಲ್ಲಿ ಸಲಿಂಗಕಾಮಿಯೋರ್ವ ಎಂಡೋಪೀಡಿತ ಬಾಲಕನ ಅತ್ಯಾಚಾರ ಮಾಡಿದ ಘಟನೆ ನಡೆದಿದೆ.

 

20 ವರ್ಷದ ಎಂಡೋ ಸಲ್ಪಾನ್ ಪೀಡಿತ ಬಾಲಕ  ವಾಕಿಂಗ್ ಗೆಂದು ಮನೆಯ ಹೊರಗೆ ಹೋದ ಸಂದರ್ಭದಲ್ಲಿ ಈ ಕ್ರೌರ್ಯ ನಡೆದಿದೆ. ಬಾಲಕನು ಮುರ  ರೈಲ್ವೆ ಕ್ರಾಸ್ ತಲುಪಿದಾಗ ಈತನ ಬಳಿ ಬಂದ ಮುಹಮ್ಮದ್ ಹನೀಫ್ ಎಂಬಾತ ಕಬ್ಬು ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾನೆ.

 

ಸ್ವಲ್ಪ ದೂರ ಹೋಗಿ ಪೊದೆಗಳಿಗಿರುವ ಜಾಗಕ್ಕೆ ಕರೆದುಕೊಂಡು ಹೋಗಿ ನೆಲದಲ್ಲಿ ಮಲಗಿ ಪ್ಯಾಂಟ್ ಜಾರಿಸಲು ತಿಳಿಸಿದಾಗ ಬಾಲಕ ನಿರಾಕರಿಸಿದ್ದಾನೆ. ಆಗ ಬಲವಂತದಿಂದ ಮುಹಮ್ಮದ್ ಹನೀಫ್ ಬಾಲಕನನ್ನು ಅತ್ಯಾಚಾರ ಮಾಡಿದ್ದಾನೆ.

 

ಅತ್ಯಾಚಾರ ಮಾಡಿದ ಬಳಿಕ ಇದನ್ನು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಮನೆಯಲ್ಲಿ ಬಾಲಕನ ವಸ್ತ್ರದಲ್ಲಿ  ಮಣ್ಣಾಗಿರುವುದನ್ನು ಗಮನಿಸಿದ ಮನೆಯವರು ಆತನಲ್ಲಿ ವಿಚಾರಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ