ಅಪ್ಪನನ್ನು ಕಾಣಲು ಅಮೇರಿಕಾದಿಂದ ಹೊರಟ ಪುನಿತ್ ರಾಜ್ ಕುಮಾರ್ ಪುತ್ರಿ

 

 



ಬೆಂಗಳೂರು: ಶುಕ್ರವಾರ ಬೆಳಿಗ್ಗೆ ಹೃದಯಘಾತದಿಂದ ಮೃತಪಟ್ಟ  ಪುನಿತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆಯಲು ಪುತ್ರಿ ಅಮೇರಿಕಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

 

ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆಯಲ್ಲಿ  ಅಮೆರಿಕದಲ್ಲಿರುವ ಮಗಳು ಧೃತಿ ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ

ವಿಶೇಷ ವಿಮಾನದ ಮೂಲಕ ಅವರು ಬೆಂಗಳೂರಿಗೆ  ಆಗಮಿಸುತ್ತಿದ್ದು ಶನಿವಾರ ರಾತ್ರಿ 11.30  ಗಂಟೆ ವೇಳೆಗೆ ಬೆಂಗಳೂರು ತಲುಪುವ ಸಾಧ್ಯತೆ ಇದೆ .ಈ ಮೊದಲು ಅವರು 4 ಗಂಟೆಗೆ ತಲುಪಲಿದ್ದಾರೆ ಎಂದು ತಿಳಿದುಬಂದಿತ್ತು.

ಮೊದಲು ನಿರ್ಧರಿಸಿದಂತೆ ಧೃತಿ ಅವರು 4   ಗಂಟೆಯ ವೇಳೆ ಸರಿಯಾಗಿ ಅಮೇರಿಕದಿಂದ ಬಂದು ತಲುಪಿದರೆ  ಶನಿವಾರವೆ ಪುನೀತ್ ಅವರ ಅಂತ್ಯಕ್ರಿಯೆ ಮಾಡುವ ಸಾಧ್ಯತೆ ಇತ್ತು. ಆದರೆ ಅವರು ರಾತ್ರಿ 11.30 ಕ್ಕೆ ತಲುಪುವ ಕಾರಣ ರವಿವಾರ ಅಂತ್ಯಕ್ರಿಯೆ ನಡೆಯಲಿದೆ