-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
elevation of Bank Directors -ಸರ್ಕಾರಿ ಅಧಿಕಾರಿಗಳ ಸಹಕಾರಿ ಬ್ಯಾಂಕ್‌‌ಗೆ ಮೂವರು ನಿರ್ದೇಶಕರ ಸೇರ್ಪಡೆ

elevation of Bank Directors -ಸರ್ಕಾರಿ ಅಧಿಕಾರಿಗಳ ಸಹಕಾರಿ ಬ್ಯಾಂಕ್‌‌ಗೆ ಮೂವರು ನಿರ್ದೇಶಕರ ಸೇರ್ಪಡೆ

ಸರ್ಕಾರಿ ಅಧಿಕಾರಿಗಳ ಸಹಕಾರಿ ಬ್ಯಾಂಕ್‌‌ಗೆ ಮೂವರು ನಿರ್ದೇಶಕರ ಸೇರ್ಪಡೆ



ದಿ ಸೌತ್ ಕೆನರಾ ಗವರ್ನಮೆಂಟ್ ಆಫೀಸರ್ ಕೋ -ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮಂಗಳೂರು



ಬ್ಯಾಂಕಿನಲ್ಲಿ ತೆರವಾದ ಮೂರು ನಿರ್ದೇಶಕರುಗಳ ಸ್ಥಾನಕ್ಕೆ ಈ ಕೆಳಗಿನವರನ್ನು ಸಹಮತದಿಂದ 2019-24 ನೆಯ ಸಾಲಿನ ಉಳಿದ ಅವಧಿಗೆ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಗಳನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.




1.ಶ್ರೀ ಪ್ರದೀಪ್ ಡಿ'ಸೋಜ, ಉಪ ನಿರ್ದೇಶಕರು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಹಾಗೂ ಮಂಗಳೂರು ಉಡುಪಿ ಕಾರವಾರ ವನ್ನೊಳಗೊಂಡ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.



2. ಶ್ರೀ ಎಸ್. ನಿರಂಜನ ಮೂರ್ತಿ, ಆಡಳಿತ ಅಧಿಕಾರಿಗಳು, ಬಂದರು ಇಲಾಖೆ, ಮಂಗಳೂರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.




3. ಶ್ರೀ ಶಮಂತ್ ಕುಮಾರ್ ಶೆಟ್ಟಿ ; ಇವರು ಎಪಿಎಂಸಿ ಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.



ದಿನಾಂಕ 8.10.2021ರಂದು ಜರುಗಿದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ನೂತನವಾಗಿ ನಾಮನಿರ್ದೇಶನಗೊಂಡ ಮೂವರು ನಿರ್ದೇಶಕರುಗಳನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. 



ತಮ್ಮ ತಮ್ಮ ಇಲಾಖೆಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅಪಾರ ಅನುಭವವನ್ನು ಪಡೆದಿರುವ ಮೂವರು ನಿರ್ದೇಶಕರುಗಳು ತಮ್ಮ ಉತ್ತಮ ಸಲಹೆ ಸೂಚನೆಗಳೊ೦ದಿಗೆ ಬ್ಯಾಂಕಿನ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ಖಂಡಿತವಾಗಿಯೂ ನೀಡಲಿದ್ದಾರೆ ಎಂದು ಆಶಿಸಿದರು.


ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ದ.ಕ. ಸರಕಾರಿ ಅಧಿಕಾರಿಗಳ ಸಹಕಾರಿ ಬ್ಯಾಂಕ್ ವೇತನದಾರರ ಸಹಕಾರಿ ಬ್ಯಾಂಕ್ ಗಳ ಪೈಕಿ ರಾಜ್ಯದಲ್ಲೇ ಅಗ್ರ ಸ್ಥಾನವನ್ನು ಪಡೆದಿದೆ.



Ads on article

Advertise in articles 1

advertising articles 2

Advertise under the article

ಸುರ