ಮಂಗಳೂರು- ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರವಾಗಿದ್ದ ಪ್ರಕರಣ- ಕೊನೆಗೂ ಅಸೀಯಾ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?-ಮತ್ತೆ ಹಿಂದೂ ಧರ್ಮಕ್ಕೆ ಹೋಗ್ತಾರ? ವಿಡಿಯೋ ನೋಡಿ

 


 

ಮಂಗಳೂರು:  ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಹಿಂದು ಯುವತಿಯೊಬ್ಬಳು ಆತನನ್ನು ಮದುವೆಯಾಗಿ , ಆತನಿಂದ ವಂಚನೆಗೊಳಗಾಗಿ ನಡೆಸುತ್ತಿದ್ದ ಹೋರಾಟವನ್ನು ನಿಲ್ಲಿಸಲು ನಿರ್ಧರಿಸಿದ್ದು ಆಕೆಯ ಪ್ರಕರಣ ಅಂತ್ಯ ಕಂಡಿದೆ.

 

ಅಸೀಯಾ ಕೇರಳದ ನಿವಾಸಿಯಾಗಿದ್ದು , ಮೂಲತ ಹಿಂದು ವಾಗಿದ್ದಳು. ಆಕೆ ಮುಸ್ಲಿಂ ಯುವಕ ಸುಳ್ಯ ತಾಲೂಕಿನ ಇಬ್ರಾಹಿಂ ಕಲೀಲ್ ಕಟ್ಟೆಮಾರ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಬಳಿಕ  ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು.

 


ಆದರೆ ಆ ಬಳಿಕ ಇಬ್ರಾಹಿಂ ಕಲೀಲ್ ಕಟ್ಟೆಮಾರ್ ಈಕೆಗೆ ಕೈಕೊಟ್ಟಿದ್ದ. ಈಕೆ ತನಗೆ ಬೇಡ ಎಂದು ನಾಪತ್ತೆಯಾಗಿದ್ದ. ಆತನಿಗಾಗಿ ಅಸೀಯಾ ಹೋರಾಟವನ್ನೆ ಮಾಡಿದ್ದಳು.ಈ ಹೋರಾಟದಲ್ಲಿ ಹಿಂದೂ ಸಂಘಟನೆಯ ನಾಯಕರು , ಮುಸ್ಲಿಂ ಸಂಘಟನೆಯ ನಾಯಕರು ಪ್ರಕರಣಕ್ಕೆ ಇತ್ಯರ್ಥಕ್ಕೆ ಶ್ರಮಿಸಿದ್ದರು.

 

ಆದರೆ ಇಬ್ರಾಹಿಂ ಕಲೀಲ್ ಕಟ್ಟೆಮಾರ್ ಇದ್ಯಾವುದಕ್ಕೂ ಬಗ್ಗದೆ ಈಕೆಯನ್ನು ಸ್ವೀಕರಿಸಲು ಒಪ್ಪಿರಲಿಲ್ಲ. ಆದರೆ ಅಸೀಯಾ ಈತನಿಗೆ ನಾನು ಬೇಡವಾಗಿದ್ದರೆ ನನ್ನ  ಬಳಿ ಬಂದು ಬೇಡ ಎನ್ನಲಿ ಎಂದು ಪಟ್ಟು ಹಿಡಿದಿದ್ದಳು.

 

ಇತ್ತೀಚೆಗೆ ಇಬ್ರಾಹಿಂ ಕಲೀಲ್ ಕಟ್ಟೆಮಾರ್ ಬಂದು ನೀನು ನನಗೆ ಬೇಡ ಎಂದು ಹೇಳಿದ್ದ. ಈ ಬಳಿಕ ಅಸೀಯಾ ಈತನಿಂದ ದೂರವಾಗಲು ನಿರ್ಧರಿಸಿದ್ದಾಳೆ

 

ಮತ್ತೆ ಹಿಂದೂ ಧರ್ಮಕ್ಕೆ ಹೋಗಲ್ಲ

ಅಸೀಯಾ ಮತ್ತೆ ಹಿಂದೂ ಧರ್ಮಕ್ಕೆ ವಾಪಾಸಾಗಲು ನಿರಾಕರಿಸಿದ್ದಾರೆ. ಇತ್ತೀಚೆಗೆ ತಾಯಿ ಸಂಪರ್ಕಿಸಿ ಮತ್ತೆ ಹಿಂದೂವಾಗಿ ಬಂದರೆ ಸೇರಿಸುವುದಾಗಿ ತಿಳಿಸಿದ್ದರು. ಆದರೆ ಅದಕ್ಕೆ ಅಸಿಯಾ ನಿರಾಕರಿಸಿದ್ದು ಮುಸ್ಲಿಂ ಆಗಿಯೆ ಇರುವೆ ಎಂದು ತಿಳಿಸಿದ್ದಾರೆ.