ಲಾಕಪ್ ನಿಂದಲೇ ಪರಾರಿಯಾಗಿರುವ ಅಪ್ರಾಪ್ತೆಯ ಅತ್ಯಾಚಾರ ಆರೋಪಿ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮತ್ತೆ ಸೆರೆ!

ಚಿಕ್ಕಮಗಳೂರು: ಅಪ್ರಾಪ್ತೆಯ ಅತ್ಯಾಚಾರ ಆರೋಪದ ಮೇಲೇ ಬಂಧನಕ್ಕೊಳಗಾಗಿರುವ ಆರೋಪಿಯೋರ್ವನು ಪೊಲೀಸ್ ಠಾಣೆಯ ಲಾಕಪ್ ನಿಂದಲೇ ಪರಾರಿಯಾಗಿರುವ ಘಟನೆ ನಡೆದಿದೆ.

ನಿಝಾಂ(26) ಪರಾರಿಯಾಗಿರುವ ಆರೋಪಿ.

ಆರೋಪಿ‌ ನಿಝಾಂ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ‌ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ‌ ಬಂಧನಕ್ಕೊಳಗಾಗಿದ್ದ. ಆದರೆ ಆರೋಪಿ ನಿಝಾಂ ಪೊಲೀಸ್ ಇಲ್ಲದ ಸಂದರ್ಭ ನೋಡಿ ಲಾಕ್ ಅಪ್ ನಿಂದ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ 
ಆರೋಪಿಯನ್ನು ಕೊಪ್ಪ ಪಟ್ಟಣದಲ್ಲಿ ಪೊಲೀಸರು ಹೆಡೆಮುರಿ ಕಟ್ಟಿ ಮತ್ತೆ ಬಂಧಿಸಿದ್ದಾರೆ.