ಕಲಬುರಗಿ: ಶಾಲಾ ಶಿಕ್ಷಕಿಯೋರ್ವರು 'ತನ್ನ ಹಾಗೂ ಮಗುವಿನ ಜೀವನ ಹಾಳುಗೆಡವಿರುವೆ' ಎಂದು ವಾಟ್ಸ್ಆ್ಯಪ್ ಸ್ಟೇಟಸ್ ಬರೆದು ಆರು ತಿಂಗಳ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಕಲಬುರಗಿಯ ಜಿಲ್ಲೆಯ ಶಹಬಾದ್ ಹೊರವಲಯದ ಕಾಗಿಣಾ ನದಿಯಲ್ಲಿ ನಡೆದಿದೆ.
ಕಲಬುರಗಿ ಜುಲ್ಲೆಯ ಶಹಬಾದ್ ನಿವಾಸಿ ಶಾಂತಕುಮಾರಿ (32) ಎಂಬವರು ಆರು ತಿಂಗಳ ಮಗು ಸಹಿತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು.
ವೃತ್ತಿಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿರುವ ಶಾಂತಾಕುಮಾರಿಯು ಚಿತಗತಾಪುರ ತಾಲೂಕಿನ ಮಾಡಬೂಳ ಗ್ರಾಮದ ಸಿದ್ದಲಿಂಗ ಎಂಬವರೊಂದಿಗೆ ವಿವಾಹವಾಗಿದ್ದರು. ಇವರಿಬ್ಬರ ನಡುವೆ ಇತ್ತೀಚೆಗೆ ವೈಮನಸ್ಸು ಉಂಟಾಗಿತ್ತು. ಎರಡು ದಿನಗಳ ಹಿಂದೆ ಶಾಂತ ಕುಮಾರಿ ಮಗುವಿನೊಂದಿಗೆ ತವರು ಮನೆಗೆ ಬಂದಿದ್ದರು. ಆದರೆ ಮೊನ್ನೆ ‘ನೀನು ನನಗೆ ಮೋಸ ಮಾಡಿದ್ದಿ ಸಿದ್ದಲಿಂಗ, ನನ್ನ ಹಾಗೂ ಮಗುವಿನ ಲೈಫ್ ಹಾಳು ಮಾಡಿದ್ದಿ’ ಎಂದು ಆಕೆ ಪತಿಯನ್ನು ಉದ್ದೇಶಿಸಿ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡು, ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದಾರೆ.
ಅಲ್ಲದೆ ಅದೇ ಸ್ಟೇಟಸ್ ನಲ್ಲಿ "ಶಿವಲಿಂಗಮ್ಮ, ಲಕ್ಷ್ಮಿ, ಲಚ್ಚು, ಅನ್ಶು ಅಕ್ಕ, ಜಗು ಅಕ್ಕ, ಗೌರಿ ಅಕ್ಕ ಐ ಹೇಟ್ ಯೂ'' ಎಂದು ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಹಬಾದ್ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೀಗ ಮುಳುಗು ತಜ್ಞರು ಶಾಂತಾ ಕುಮಾರಿ ಮೃತದೇಹ ಪತ್ತೆಯಾಗಿದೆ. ಮಗುವಿಗಾಗಿ ಹುಡುಕಾಟ ಮುಂದುವರಿದಿದೆ.