ಕೆಎಸ್ಆರ್‌ಟಿಸಿಯಲ್ಲಿ ಉದ್ಯೋಗ ದೊರಕಿಸುದಾಗಿ 500 ಮಂದಿಗೆ 15 ಕೋಟಿ ರೂ. ವಂಚಸಿದ ಆರೋಪಿಗಳು ಪೊಲೀಸ್ ಬಲೆಗೆ

ಬೆಂಗಳೂರು: ಕೆಎಸ್ಆರ್‌ಟಿಸಿಯಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ 500 ಕ್ಕೂ ಅಧಿಕ ಮಂದಿಯನ್ನು ನಂಬಿಸಿ ಸುಮಾರು 15 ಕೋಟಿ ರೂ‌. ವಂಚನೆಗೈದ ಖತರ್ನಾಕ್‌ ಆರೋಪಿಗಳು  ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಕೆಎಸ್‌ಆರ್‌ಟಿಸಿಯಲ್ಲಿ ಚಾಲಕ ವೃತ್ತಿಯಲ್ಲಿದ್ದ ಮಂಜುನಾಥ್‌ ಹಾಗೂ ಆತನ ಸ್ನೇಹಿತ ಅನಿಲ್ ಬಂಧಿತ ಆರೋಪಿಗಳು.

ಕೆಎಸ್‌ಆರ್‌ಟಿಸಿಯಲ್ಲಿ ಚಾಲಕ ವೃತ್ತಿಯಲ್ಲಿದ್ದ ಮಂಜುನಾಥ್ ನನ್ನು. ನಡವಳಿಕೆ ಸರಿಯಿಲ್ಲದ ಹಿನ್ನೆಲೆಯಲ್ಲಿ ಕೆಲಸದಿಂದ ವಜಾಗೊಳಿಸಲಾಗಿತ್ತು. ಆದರೆ ಆತ ಅಷ್ಟಕ್ಕೇ ಸುಮ್ಮನಿರದೆ  ದುಡ್ಡು ಮಾಡಲು ಖತರ್ನಾಕ್ ಐಡಿಯಾ ಮಾಡಿದ್ದಾನೆ. ಈತನಿಗೆ ಕೆಎಸ್‌ಆರ್‌ಟಿಸಿಯಲ್ಲಿ ಉದ್ಯೋಗ ಪಡೆಯಲು ಎಷ್ಟು ಹಣ ನೀಡಲು ಕೆಲವರು ಮುಂದಾಗುತ್ತಿದ್ದಾರೆ ಎಂಬದು ತಾನು ಕೆಲಸ ಮಾಡುತ್ತಿದ್ದ ಸಂದರ್ಭವೇ ಅರಿತಿದ್ದ. ಇದನ್ನೇ ಬಂಡವಾಳವನ್ನಾಗಿಸಿದ ಆತ ಹಗರಿಬೊಮ್ಮನಹಳ್ಳಿ ಮೂಲದ ತನ್ನ ಸ್ನೇಹಿತ ಅನಿಲ್‌ನೊಂದಿಗೆ ಸೇರಿ ಉದ್ಯೋಗಾಕಾಂಕ್ಷಿಗಳಿಗೆ ಸ್ಕೆಚ್‌ ಹಾಕಿ ಕಾರ್ಯನಿರತನಾಗಿದ್ದ. 

ಇದುವರೆಗೆ ಇವರಿಬ್ಬರೂ ಜೊತೆಗೂಡಿ 500ಕ್ಕೂ ಅಧಿಕ ಮಂದಿಗೆ ಕೆಎಸ್‌ಆರ್‌ಟಿಸಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾನೆ. ಈತ 'ತನಗೆ ಕೆಎಸ್‌ಆರ್‌ಟಿಸಿಯಲ್ಲಿ ಉನ್ನತ ವರ್ಗದ ಹುದ್ದೆಯಲ್ಲಿರುವವರ ಹಲವು ಮಂದಿಯ ಪರಿಚಯವಿದೆ. ತಾನು ಅವರಲ್ಲಿ ಶಿಫಾರಸು ಮಾಡಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿದ್ದ.‌ ಈವರೆಗೆ ಆತ ಸುಮಾರು 15 ಕೋಟಿ ರೂ. ವಂಚನೆಗೈದಿರುವುದಾಗಿ ತಿಳಿದು ಬಂದಿದೆ. 

ಈ ವಂಚನೆ ಕೃತ್ಯ ಎಸಗಲು ಆರೋಪಿ ಮಂಜುನಾಥ್ 100 ಕ್ಕೂ ಅಧಿಕ ಸಿಮ್ ಗಳನ್ನು ಮತ್ತು ಹತ್ತಾರು ಮೊಬೈಲ್‌ ಗಳನ್ನು ಬಳಸಿದ್ದಾನೆ. ಅಲ್ಲದೆ ಈ ವಂಚನೆ ಪೊಲೀಸರಿಗೆ ತಿಳಿಯಬಾರದೆಂದು ಇಬ್ಬರೂ ಸೇರಿ ಪ್ಲ್ಯಾನ್ ಮಾಡಿದ್ದಾರೆ.

ಬಳ್ಳಾರಿ, ಗದಗ, ಚಿತ್ರದುರ್ಗ, ದಾವಣಗೆರೆ ಸುತ್ತಲಿನ ಅನೇಕ ಮಂದಿ ಈತನ ವಂಜನೆಯ ಬಲೆಗೆ ಬಿದ್ದಿದ್ದಾರೆ. ಉದ್ಯೋಗ ಕೊಡಿಸುವುದು ತಾನು ಎಂದು ಹೇಳುತ್ತಿದ್ದ ಮಂಜುನಾಥ್, ದುಡ್ಡನ್ನು  ಅನಿಲ್‌ನ ಅಕೌಂಟ್‌ಗೆ ಹಾಕಿಸಿಕೊಳ್ಳುತ್ತಿದ್ದ. ಈತನ ಬಗ್ಗೆ ಗುಮಾನಿ ಹೊಂದಿದ್ದ ದುಡ್ಡು ಕಳೆದುಕೊಂಡ ಹಲವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.