-->
ಹದಿಹರೆಯದಲ್ಲಿ ಮೂಡಿದ ಇವರ ಪ್ರೇಮಕ್ಕೆ ಹೆತ್ತವರೇ ಮುಳ್ಳಾದರು: ಆದ್ರೆ 40 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಯ್ತು !

ಹದಿಹರೆಯದಲ್ಲಿ ಮೂಡಿದ ಇವರ ಪ್ರೇಮಕ್ಕೆ ಹೆತ್ತವರೇ ಮುಳ್ಳಾದರು: ಆದ್ರೆ 40 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಯ್ತು !

ಲಂಡನ್: ಇವರದ್ದು ಅಂತಿಂಥ ಪ್ರೀತಿಯಲ್ಲ ಭಾರೀ ಸಂಚಲನ ಸೃಷ್ಟಿಸಿರುವ ಪ್ರೇಮಕಥೆ ಇವರದ್ದು. ಮಾರ್ಕ್‌ ಬೆಥೆಲ್‌ ಹಾಗೂ ಪೆನ್ನಿ ಉಂಬರ್ಸ್‌ ಇಬ್ಬರೂ ಬ್ರಿಟನ್‌ನವರು. ಎಲ್ಲರಂತೆ ಇವರ ಪ್ರೀತಿಯಲ್ಲಿಯೂ ಹೃದಯದ ಭಾಷೆಯಿತ್ತು. ಹೇಳಿಕೊಳ್ಳಲಾಗದ ಭಾವನೆಯಿತ್ತು. ಈ ಜೋಡಿಯೂ ಶಾಲೆ, ಕಾಲೇಜಿಗೆ ಚಕ್ಕರ್‌ ಹೊಡೆದು ಸುತ್ತಾಡುತ್ತಿತ್ತು. 

ಆದರೆ ವಿಧಿ ನಿಯಾಮಕವೇ ಬೇರೆಯೇ ಇತ್ತು. 1970ರ ಸಮಯದಲ್ಲಿ ಪ್ರೀತಿಯ ಅಮಲಲ್ಲಿ ತೇಲಾಡುತ್ತಿದ್ದ ಜೋಡಿ ಇದು. ಆ ಸಮಯಕ್ಕೆ ಪೆನ್ನಿ ಉಂಬರ್ಸ್ ಗೆ 16 ವರ್ಷ. ಆ ಸಮಯದಲ್ಲಿ ಆಕೆ ಖಾಸಗಿ ಶಾಲೆಯಲ್ಲಿದ್ದರೆ, ಮಾರ್ಕ್ ಬೆಥೆಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. 

ಈ ಸಮಯದ ಒಂದು ದಿಬ ಅಚಾನಕ್ಕಾಗಿ ಇಬ್ಬರ ಭೇಟಿಯಾಗುತ್ತದೆ. ಮೊದಲ ಭೇಟಿಯಲ್ಲಿಯೇ ಪ್ರೀತಿ ಮೊಳಕೆಯೊಡೆಯುತ್ತದೆ. ಎಲ್ಲೂ ಈ ಬಗ್ಗೆ ಹೇಳದಿದ್ದರೂ ಕಣ್ಣಲ್ಲಿಯೇ ಸಂದೇಶ ರವಾನೆ ಆಗಿರುತ್ತದೆ. ಮಾರ್ಕ್‌ ಬೆಥೆಲ್‌ಗೆ ಮತ್ತೆ ಮತ್ತೆ ಪೆನ್ನಿ ಉಂಬರ್ಸ್‌ ನನ್ನು ಭೇಟಿಯಾಗಬೇಕೆನ್ನುವ ಹುಮ್ಮಸ್ಸು ಇರುತ್ತದೆ. ಇಬ್ಬರೂ ಭೇಟಿಯಾಗುತ್ತಾರೆ. ಒಂದು ದಿನ ಪ್ರಪೋಸ್‌ ಮಾಡಿಯೇ ಬಿಡುತ್ತಾರೆ. ಪೆನ್ನಿ ಉಂಬರ್ಸ್‌ ಪ್ರೀತಿಗೆ ಅಸ್ತು ಅನ್ನುತ್ತಾರೆ. 

ಅಲ್ಲಿಂದ ಅವರಿಬ್ಬರ ಪ್ರೀತಿಯ ಪ್ರಯಾಣ ಆರಂಭವಾಗುತ್ತದೆ. ಬೇರೆ ಬೇರೆ ವಿವಿಯಲ್ಲಿ ಇಬ್ಬರೂ ಅಧ್ಯಯನ ನಡೆಸುತ್ತಿದ್ರೂ, ತರಗತಿಗೆ ಗೈರು ಹಾಜರಾಗಿ ಸುತ್ತಾಡಲು ಆರಂಭಿಸುತ್ತಾರೆ‌. ಇವರು ಲಂಡನ್‌ನಲ್ಲಿಯೇ ಇರೋ ಬೇರೆ ಬೇರೆ ವಿವಿಯಲ್ಲಿ ಅಧ್ಯಯನ ಮಾಡ್ತಾ ಇದ್ದರು‌. ಆದರೆ ಇದೆಲ್ಲಾ ಇವರಿಗೆ ಅಡ್ಡಿಯಾಗಿರಲೇ ಇಲ್ಲ. ತರಗತಿಗೆ ಗೈರು ಹಾಕಿಯಾದ್ರೂ ಭೇಟಿಯಾಗುತ್ತಿದ್ದರು. 

ಇಷ್ಟೆಲ್ಲಾ ಸಂತೋಷದಿಂದ್ದ ಜೋಡಿಯ ಪ್ರೀತಿಗೆ ದುರಂತವೊಂದು ಎದುರಾಗಿ ಬಿಟ್ಟಿರು. ಇವರಿಬ್ಬರ ಪ್ರೀತಿಯ ವಿಚಾರ ಪೆನ್ನಿ ತಂದೆಗೆ ಗೊತ್ತಾಗುತ್ತದೆ. ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿಯ ನಡುವೆ ವರ್ಣಭೇದ ನೀತಿಯೇ ದೊಡ್ಡ ವಿಲನ್‌ ಆಗಿತ್ತು. ಪೆನ್ನಿ ಪ್ರೀತಿಯಲ್ಲಿ ಬಲೆಗೆ ಬಿದ್ದಿರೋದು ಆಕೆಯ ತಂದೆಗೆ ಗೊತ್ತಾಗಿತ್ತು. ವಿಶ್ವವಿದ್ಯಾಲಯದ ಪ್ರೊಫೆಸರ್‌ ಆಗಿದ್ದ ಈತ ಪೆನ್ನಿಗೆ ಗೊತ್ತಾಗದಂತೆ ಬೆಥೆಲ್‌ ಅನ್ನು ಭೇಟಿ ಮಾಡಿದ್ದ. ಆ ಸಂದರ್ಭದಲ್ಲಿ ಆತ ನೀನು ಪೆನ್ನಿಯಿಂದ ದೂರವಾಗಬೇಕು. ಇಲ್ಲದಿದ್ದಲ್ಲಿ ನಿನ್ನ ಸ್ಕಾಲರ್‌ಶಿಪ್‌ ವಾಪಸ್‌ ಪಡೆದುಕೊಳ್ಳಬೇಕಾಗುತ್ತದೆ ಎಙದು ಬೆದರಿಕೆ ಹಾಕುತ್ತಾನೆ. 

ಇತ್ತ ಬೆಥೆಲ್‌ ಮನೆಯಲ್ಲಿಯೂ ಆತ ಬಿಳಿಯ ಜನಾಂಗದ ಪೆನ್ನಿ ಜೊತೆ ಸುತ್ತಾಡುವುದು ಇಷ್ಟವಿರುವುದಿಲ್ಲ. ಮನೆಯಲ್ಲಿ ಬಡತನ ಬೇರೆ. ಶಿಕ್ಷಣ ಮುಗಿಸಬೇಕೆಂದರೆ ಸ್ಕಾಲರ್‌ಶಿಪ್‌ ಬೇಕೇಬೇಕು. ಇಂತಹ ಸಂದರ್ಭದಲ್ಲಿ ಬೆಥೆಲ್‌ ಪ್ರೀತಿಯ ಕೈ ಬಿಡಲು ನಿರ್ಧರಿಸುತ್ತಾನೆ. ಪೆನ್ನಿಯಿಂದ ದೂರಾಗುತ್ತಾನೆ. ಆದರೆ ಪೆನ್ನಿಗೆ ಮಾತ್ರ ಬೆಥೆಲ್‌ ದೂರವಾದ ವಿಚಾರ ನಿಗೂಢವಾಗಿಯೇ ಇತ್ತು. 

ಕೂತಲ್ಲಿ ನಿಂತಲ್ಲಿ ತಮ್ಮ ಪ್ರೆಮ ವೈಫಲ್ಯದ ಬಗ್ಗೆಯೇ ಯೋಚಿಸುತ್ತಾ ಕಳೆದ ಪೆನ್ನಿ ಹಾಗೂ ಬೆಥೆಲ್‌ ಬಳಿಕ ಆ ನೋವಿನ ನಡುವೆಯೇ ಬೇರೆ ಬೇರೆಯವರನ್ನು ಮದುವೆಯಾದರು‌. ಆದರೆ ಆ ಸಂಬಂಧ ಬಹಳ ದಿನ ಉಳಿಯಲೇ ಇಲ್ಲ. ಪೆನ್ನಿ ವಿಚ್ಛೇದನ ಪಡೆದರೆ, ಬೆಥೆಲ್‌ ಕೂಡ ವಿಚ್ಛೇದನ ಪಡೆದು ಏಕಾಂಗಿಯಾಗಿ ಜೀವನ ಮಾಡ್ತಾ ಇದ್ದರು.

ಈ ನಡುವೆ ಪೆನ್ನಿ ಹಾಗೂ ಬೆಥೆಲ್‌ ಪ್ರೀತಿ ಮುರಿದು ಬಿದ್ದು ಬರೋಬ್ಬರಿ 40 ವರ್ಷವೇ ಆಗಿತ್ತು. ಇದೇ ಸಮಯಕ್ಕೆ ಅವರ ಪ್ರೀತಿಗೆ ಮತ್ತೊಂದು ತಿರುವು ಸಿಕ್ಕಿತು.  ಫೇಸ್‌ಬುಕ್‌ ಅನ್ನೋ ಸಾಮಾಜಿಕ ಜಾಲತಾಣದಲ್ಲಿ ಒಂದು ದಿನ ಬೆಥೆಲ್‌  ಜಾಲಾಡುತ್ತಿದ್ದಾಗ ಪ್ರೊಫೈಲ್‌ವೊಂದನ್ನು ನೋಡಿದ್ದಾರೆ‌. ಅದು ಪೆನ್ನಿಯೇ ಇರಬಹುದೆಂದು ಅವರಿಗೆ ಅನಿಸಿದೆ. 

ಹಾಗೆ ಅನ್ನಿಸಿದ್ದೇ ಆತ 'ನೀವು ಪೆನ್ನಿನಾ' ಎಂದು ಕೇಳಿದ್ದಾರೆ ಎಂದು ಬೆಥೆಲ್‌ ಕೇಳಿದ್ದಾರೆ. ಅತ್ತಕಡೆಯಿಂದ
'ಹೌದು, ತಾನು ಪೆನ್ನಿ' ಎಂಬ ಉತ್ತರ ಬಂದಿದೆ. ಇದೇ ನೋಡಿ, ವಿಧಿಯಾಟ. ಹದಿಹರೆಯದ ವಯಸ್ಸಲ್ಲಿ ಮೂಡಿದ ಪ್ರೇಮ ಹಾಗೇ ಮಾಯವಾಗಿತ್ತು. ಆದ್ರೆ, ಬರೋಬ್ಬರಿ 40 ವರ್ಷಗಳ ಬಳಿಕ ಮತ್ತೊಮ್ಮೆ ಅದು ಚಿಗುರೊಡೆದಿದೆ. ಹಾಗೇ ಸಂದೇಶ ವಿನಿಮಯ ಮಾಡಿಕೊಂಡು ಕಷ್ಟ ಸುಖವನ್ನು ಹಂಚಿಕೊಂಡಿದ್ದಾರೆ. ಫೋನ್‌ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಮಾತನಾಡಲು‌ ಆರಂಭಿಸಿದರು. ಅಂತಿಮವಾಗಿ ತಾವು ಜೊತೆಯಾಗಿ ಜೀವಿಸಲು ನಿರ್ಧಾರ ಮಾಡಿದ್ದಾರೆ. ಇದೀಗ ಈ ಜೋಡಿ ಬಹಾಮಾಸ್‍ಗೆ ಬಂದು ನೆಲೆಸಿದೆ. ಈ ಜೋಡಿಯ ಸುಖಸಂಸಾರ ಮಾಡಲಿ ಅಂತ ಶುಭ ಹಾರೈಸೋಣ.

Ads on article

Advertise in articles 1

advertising articles 2

Advertise under the article