ಬೆಳ್ತಂಗಡಿ ಪಿಲ್ಯದ 30 ವರ್ಷದ ಪವಿತ್ರಾ ಕುಮಾರಿ ಮೆದುಳಿನ ರಕ್ತಸ್ರಾವದಿಂದ ನಿಧನ

 


 


ಮಂಗಳೂರು : ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ನಿವಾಸಿ, ಪವಿತ್ರಾ ಕುಮಾರಿ(30) ಅವರು ಅಸೌಖ್ಯದಿಂದ .11 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಂಗಳೂರಿನ ಮಾಂಡೋವಿ ಮೋಟಾರ್ಸ್ ಟೂ ವಾಲ್ಯೂ ಸಂಸ್ಥೆಯ ವ್ಯವಸ್ಥಾಪಕ ಅಕ್ಷಯ್ ಕುಮಾರ್ ಅವರ ಪತ್ನಿ ಯಾಗಿರುವ ಪವಿತ್ರಾ ಕುಮಾರಿ ಅವರು ಮೆದುಳಿನ ರಕ್ತಸ್ರಾವ ಖಾಯಿಲೆಯಿಂದ ಬಳಲುತ್ತಿದ್ದರು.

 ಇವರಿಗೆ 2 ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆದಿದ್ದು, ಬಳಿಕ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಕಾಯಿಲೆ ಉಲ್ಬಣಗೊಂಡ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಇವರು ಪಿಲ್ಯ ಗುಡ್ ಪ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.




 

BREAKING NEWS
Loading latest news...
Join our WhatsApp Channel Powered By : Online Pudu