
ಉಡುಪಿ ಯಲ್ಲಿ 26 ವರ್ಷದ ಯುವತಿ ಪವಿತ್ರ ನಾಪತ್ತೆ!
10/31/2021 03:07:00 AM
ಉಡುಪಿ: ಉಡುಪಿಯಲ್ಲಿ 26 ವರ್ಷದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಶಿರ್ವ ಗ್ರಾಮದ ಕೋಡುಗುಡ್ಡೆ ಹೌಸ್ ಪವಿತ್ರಾ(26) ನಾಪತ್ತೆಯಾದವರು. ಇವರು ಅಕ್ಟೋಬರ್ 26 ರಂದು 8.30 ರ ಸಮಯಕ್ಕೆ ಕೋಡುಗುಡ್ಡೆ ಹೌಸ್ ಮನೆಯಿಂದ ಹೊರಗೆ ಹೋದವರು ಮನೆಗೆ ಮರಳಿ ಬಂದಿಲ್ಲ.
ಪವಿತ್ರಾ ಅವರು 5 ಅಡಿ 2 ಇಂಚು ಎತ್ತರವಿದ್ದು, ಬಿಳಿ ಮೈ ಬಣ್ಣ, ಸಪೂರ ಶರೀರ, ಕೇಸರಿ ಬಣ್ಣದ ಚೂಡಿದಾರ, ಹಸಿರು ಬಣ್ಣದ ಪ್ಯಾಂಟ್ ಧರಿಸಿದ್ದು, ಮೂಗಿನ ಮೇಲೆ ಹಳೆ ಗಾಯದ ಗುರುತು ಇದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೋಲಿಸ್ ಉಪಾಧೀಕ್ಷಕರು,ಕಾರ್ಕಳ ವಿಭಾಗ, ಕಾರ್ಕಳ ದೂ.ಸಂಖ್ಯೆ: 08258-231333-9480805421, ಪೋಲಿಸ್ ವೃತ್ತ ನೀರೀಕ್ಷಕರು ಕಾಪು, ವೃತ್ತ ಕಚೇರಿ ದೂ.ಸಂಖ್ಯೆ: 0820-2552133,94808054431, ಅಥವಾ ಶಿರ್ವ ಪೋಲಿಸ್ ಠಾಣೆ ದೂ.ಸಂಖ್ಯೆ: 0820-2554139,9480805451 ನ್ನು ಸಂಪರ್ಕಿಸಬಹುದಾಗಿದೆಂದು ಶಿರ್ವಾ ಪೋಲಿಸ್ ಉಪನೀರಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.