ಮಾರಕಾಸ್ತ್ರದಿಂದ ಕೊಚ್ಚಿ 23 ವರ್ಷದ ಯುವಕನ ಹತ್ಯೆ🛑

ಶಿವಮೊಗ್ಗ: ಯುವಕನೋರ್ವನನ್ನು  ದುಷ್ಕರ್ಮಿಗಳ ತಂಡವೊಂದು‌ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಬೈಪಾಸ್ ಗೆ ಹೊಂದಿಕೊಂಡಿರುವ ವಾದಿ- ಎ- ಹುದಾ ಬಡಾವಣೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ವಾದಿ- ಎ- ಹುದಾ ಬಡಾವಣೆಯ ನಿವಾಸಿ ಝೈನುದ್ದೀನ್(23) ಕೊಲೆಯಾದ ದುರ್ದೈವಿ ಯುವಕ.   ಝೈನುದ್ದೀನ್ ರಾತ್ರಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡವೊಂದು ಏಕಾಏಕಿ ದಾಳಿ ನಡೆಸಿದೆ. ಬಳಿಕ ಆತನನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಹಳೆವೈಷಮ್ಯವೇ ಈ ಕೊಲೆಗೆ ಕಾರಣ ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಝೈನುದ್ದೀನ್ ಮೇಲೆ ದೊಡ್ಡ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.