-->
ಬಿರಿಯಾನಿ ತಿನ್ನುವ ಆಸೆಗೆ ಬಲಿ ಬಿದ್ದು 2 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ

ಬಿರಿಯಾನಿ ತಿನ್ನುವ ಆಸೆಗೆ ಬಲಿ ಬಿದ್ದು 2 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ

ಬೆಂಗಳೂರು: ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಆಟೋಚಾಲಕನೋರ್ವನು  ಬಿರಿಯಾನಿ ತಿನ್ನುವ ಆಸೆಯಿಂದ ತನ್ನಲ್ಲಿದ್ದ 2 ಲಕ್ಷ ರೂ. ಹಣವನ್ನೇ ಕಳೆದುಕೊಂಡ ‌ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

ಹನುಮಂತರಾಯ ಎಂಬ ಆಟೋಚಾಲಕನೇ ಹಣ ಕಳೆದುಕೊಂಡಾತ.

ಸಾಲದ ಬಾಧೆಯಿಂದ ತತ್ತರಿಸುತ್ತಿದ್ದ ಆಟೊ ಚಾಲಕ ಆ ಭಾರ ಇಳಿಸಿಕೊಳ್ಳಲು ಚಿನ್ನವನ್ನು  ಅಡವಿಟ್ಟು 2 ಲಕ್ಷ ರೂ.‌ ಸಾಲ ಪಡೆದಿದ್ದ. ಆ ಹಣವನ್ನು ಪಡೆದು ಮರಳಿ ಬರುತ್ತಿದ್ದ ಸಂದರ್ಭ ಬಿರಿಯಾನಿ ತಿನ್ನಲು ಹೋಗಿದ್ದ. 

ಹಣವನ್ನು ಬೈಕ್​ ಸೈಡ್​ ಲಾಕರ್​ನಲ್ಲಿಟ್ಟು ಬಾಮೈದನ ಜೊತೆಗೆ ಮಾರ್ಗಮಧ್ಯೆ ಬಿರಿಯಾನಿ ತಿನ್ನಲು ದ್ವಿಚಕ್ರವಾಹನ ನಿಲ್ಲಿಸಿದ್ದಾನೆ. ಇದೇ ಸಂದರ್ಭದಲ್ಲಿ ಕಳ್ಳರು ಆತನ ಬೈಕ್​ ನಲ್ಲಿದ್ದ ಹಣದ ಗಂಟನ್ನೇ ಎಗರಿಸಿದ್ದಾರೆ. ಇವರು ಕಳವು ಕೃತ್ಯ ನಡೆಸಿ ಇನ್ನೊಂದು ಬೈಕ್​ನಲ್ಲಿ ಪರಾರಿ ಆಗಿರುವುದು ಸಿಸಿಟಿವಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ. 

ಇತ್ತೀಚೆಗೆ ನಡೆದಿರುವ ಈ ಕಳವು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗಾಗಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Ads on article

Advertise in articles 1

advertising articles 2

Advertise under the article