vote ಮಾಡಿ- ನಿಮ್ಮ ಪ್ರಕಾರ ಕಲಬುರಗಿಯಲ್ಲಿ ಜೆಡಿಎಸ್ ಯಾರಿಗೆ ಬೆಂಬಲಿಸಬೇಕು- ಬಿಜೆಪಿಗೋ, ಕಾಂಗ್ರೆಸ್ ಗೋ



 ರಾಜ್ಯದಲ್ಲಿ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವುದು ಕಲಬರುಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನ.. ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ನಾಲ್ಕು ಸ್ಥಾನ ಪಡೆದಿರುವ ಜೆಡಿಎಸ್ ಕಿಂಗ್ ಮೇಕರ್ ಸ್ಥಾನದಲ್ಲಿದೆ.  27 ಸ್ಥಾನ ಕಾಂಗ್ರೆಸ್ ಗೆ,  23  ಸ್ಥಾನ ಬಿಜೆಪಿಗೆ ಬಂದಿದ್ದು ನಾಲ್ಕು ಸ್ಥಾನ ಗೆದ್ದಿರುವ ಜೆಡಿಎಸ್ ಬೆಂಬಲ ಅಧಿಕಾರಕ್ಕೆ ಅಗತ್ಯವಾಗಿದೆ. ದೇವೆಗೌಡರ ಜೊತೆ  ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು  ಕುಮಾರಸ್ವಾಮಿ ಅವರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪರ್ಕದಲ್ಲಿದ್ದಾರೆ.  ಜೆಡಿಎಸ್ ಇನ್ನೂ ತಮ್ಮ ನಿಲುವನ್ನು ಪ್ರಕಟಿಸಿಲ್ಲ. ಈ ಸಂದರ್ಭದಲ್ಲಿ ಜೆಡಿಎಸ್ ಯಾವ ಪಕ್ಷವನ್ನು ಬೆಂಬಲಿಸುವದು ಸೂಕ್ತ ಎಂಬುದನ್ನು ಈ ಕೆಳಗೆ ಇರುವ ಟ್ವಿಟರ್ ಲಿಂಕ್ ನ ವೋಟ್ ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.