Recruitment in UPSC- ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು 29/09/2021 ಕೊನೆ ದಿನ



ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ. 'ಕೇಂದ್ರ ಲೋಕಸೇವಾ ಆಯೋಗ' ('UPSC') ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.


ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳ ದಾಖಲೆ ಯಾ ಪ್ರಮಾಣಪತ್ರಗಳು ಹಿಂದಿ ಅಥವಾ ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಯಲ್ಲಿ ಇದ್ದರೆ ಆ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿ ಯಾ ನೋಟರಿ ದೃಢೀಕರಣ ಮಾಡಿದ ಪ್ರತಿ ಸಲ್ಲಿಸಬೇಕು.


ಎಸ್‌.ಸಿ.,, ಎಸ್‌.ಟಿ.,, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು ರೂ. 25 /- ಅರ್ಜಿ ಶುಲ್ಕ ಪಾವತಿಸಬೇಕು.


ಯಾವ ಇಲಾಖೆಯಲ್ಲಿ ನೇಮಕಾತಿ..?

ಲೋಕೋಪಯೋಗಿ ಇಲಾಖೆ, ನಾಗರಿಕ ಸಿಬ್ಬಂದಿ ನಿರ್ದೇಶನಾಲಯ, ಗುಪ್ತಚರ ಇಲಾಖೆ, ಕೇಂದ್ರ ಲೋಕಸೇವಾ ಆಯೋಗ, ರಕ್ಷಣಾ ಉತ್ಪಾದನಾ ಇಲಾಖೆಯ ಗುಣಮಟ್ಟ ಖಾತ್ರಿ ಇಲಾಖೆ, ಗಾಜಿಯಾಬಾದ್‌ನಲ್ಲಿ ಇರುವ ರಾಷ್ಟ್ರೀಯ ಸಾವಯವ ಕೃಷಿ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳು...


ಶೈಕ್ಷಣಿಕ ಅರ್ಹತೆ

ಎಲೆಕ್ಟ್ರಾನಿಕ್ಸ್ ಯಾ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್ಸ್‌ನಲ್ಲಿ ಬಿಇ / ಬಿಟೆಕ್ / ಬಿಎಸ್‌ಸಿ / ಮೈಕ್ರೋಬಯಾಲಜಿ, ಸಸ್ಯಶಾಸ್ತ್ರ, ಲೆಕ್ಕಶಾಸ್ತ್ರದಲ್ಲಿ ಎಂಎಸ್‌ಸಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಶೇ. 55 ಅಂಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು.


ವಯೋಮಿತಿ:- ಆಯಾ ಹುದ್ದೆಗೆ ಅನುಗುಣವಾಗಿ ಗರಿಷ್ಟ 30 ರಿಂದ 55 ವರ್ಷ

ಮೀಸಲಾತಿ ಅಭ್ಯರ್ಥಿಗಳಿಗೆ ಸಡಿಲಿಕೆ ಇದೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29/09/2021

ಹೆಚ್ಚಿನ ಮಾಹಿತಿಗೆ ಯುಪಿಎಸ್‌ಸಿ ಅಂತರ್ಜಾಲ ಸಂಪರ್ಕಿಸಬಹುದು.

http://www.upsc.gov.in