-->

Opportunity to upgrade business - ಕಿರು ಆಹಾರ ಉದ್ಯಮಗಳ ಉನ್ನತೀಕರಣಕ್ಕೆ ಅವಕಾಶ: ಇಲ್ಲಿದೆ ಉಪಯುಕ್ತ ಮಾಹಿತಿ

Opportunity to upgrade business - ಕಿರು ಆಹಾರ ಉದ್ಯಮಗಳ ಉನ್ನತೀಕರಣಕ್ಕೆ ಅವಕಾಶ: ಇಲ್ಲಿದೆ ಉಪಯುಕ್ತ ಮಾಹಿತಿ




ಮಂಗಳೂರು: ಆತ್ಮನಿರ್ಭರ ಭಾರತ್ ಅಭಿಯಾನದ 'ಪ್ರಧಾನ ಮಂತ್ರಿಗಳ ಅತಿ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ಕಾನೂನುಬದ್ಧಗೊಳಿಸುವಿಕೆ” ಅಂಗವಾಗಿ ಜಿಲ್ಲೆಯಲ್ಲಿ ಸಮುದ್ರ ಮೀನು ಉತ್ಪನ್ನಗಳ ಕಿರು ಉದ್ಯಮ ಘಟಕ, ಮಾರಾಟ ಮತ್ತು ರಫ್ತು ಆಧಾರಿತ ಘಟಕಗಳನ್ನು ಸ್ಥಾಪಿಸುವ ಹಾಗೂ ಇತರ ಕಿರು ಆಹಾರ ಉದ್ಯಮಗಳ ಉನ್ನತೀಕರಣ ಮಾಡಲು ಲಘು ಉದ್ಯಮಪತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ವೈಯಕ್ತಿಕ ಹಾಗೂ ನೋಂದಾಯಿತ ಕೃಷಿ ಉತ್ಪಾದಕರ ಸಂಸ್ಥೆ, ಸ್ವ-ಸಹಾಯ ಸಂಘಗಳು ಮತ್ತು ಸಹಕಾರ ಸಂಘಗಳ ಯೋಜನಾ ವೆಚ್ಚದ ಶೇ. 35ರಷ್ಟು ಈ ಯೋಜನೆಯಲ್ಲಿ ಸಬ್ಸಿಡಿಯಾಗಿ ನೀಡಲಾಗುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ಮೂಲಕ ಪಡೆಯಬಹುದು. http://pmfme.mofpi.gov.in ಹಾಗೂ http://pmfme.mofpi.gov.in/mis


'ಸಾಗರ ಮೀನು ಉತ್ಪನ್ನಗಳು ಮತ್ತು ಇತರ ಲಘು ಆಹಾರ ಉದ್ಯಮ' ಘಟಕಗಳ ಫಲಾನುಭವಿಗಳ ನೋಂದಾವಣಿಗೆ ಅರ್ಹತೆ:


ನೂತನವಾಗಿ ಸ್ಥಾಪನೆಯಾಗುವ ಕಿರು/ಲಘು ಆಹಾರ ಉದ್ಯಮ ಘಟಕ ಕೇವಲ ಸಮುದ್ರ ಮೀನು ಉತ್ಪನ್ನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಜೊತೆಗೆ ಈಗ ಚಾಲ್ತಿಯಲ್ಲಿರುವ ಎಲ್ಲಾ ಕಿರು ಆಹಾರ ಉದ್ಯಮ ಘಟಕಗಳನ್ನು ಉನ್ನತೀಕರಿಸಲು ಹಾಗೂ ವಿಸ್ತರಣೆ ಮಾಡಲು ಅವಕಾಶ ಇದೆ. ಲಘು/ಕಿರು ಆಹಾರ ಉದ್ದಿಮೆ ಘಟಕ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಇರಬೇಕು.


ಅರ್ಜಿದಾರರು ಉದ್ಯಮದ ಮಾಲಕರಾಗಿರಬೇಕು, ಉದ್ಯಮವು ಒಂದೋ ಮಾಲಿಕತ್ವ, ಇಲ್ಲವೇ ಪಾಲುದಾರಿಕೆ ಸಂಸ್ಥೆಯಾಗಿರಬೇಕು. ಅರ್ಜಿದಾರರು ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು. ಮತ್ತು ಕನಿಷ್ಟ 8ನೇ ತರಗತಿ ವಿದ್ಯಾಭ್ಯಾಸ ಹೊಂದಿರಬೇಕು. ಉದ್ಯಮ ಘಟಕದಲ್ಲಿ 10ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರಬೇಕು. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಯೋಜನೆ ಫಲಾನುಭವಿಯಾಗುವ ಅವಕಾಶ ಇರುತ್ತದೆ. ಯೋಜನಾ ವೆಚ್ಚವು ಈಗಿರುವ ವಹಿವಾಟಿಗಿಂತ ಹೆಚ್ಚಿರಬಾರದು. ಅರ್ಜಿದಾರರಿಗೆ ಉದ್ಯಮ ನಿರ್ವಹಣೆಯಲ್ಲಿ ಕನಿಷ್ಟ ಮೂರು ವರ್ಷಗಳ ಅನುಭವವಿರಬೇಕು.


ಈ ಕುರಿತ ಇನ್ನಷ್ಟು ಮಾಹಿತಿಗೆ ಮೀನುಗಾರಿಕೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಅಥವಾ ಪಶು ಸಂಗೋಪನಾ ಇಲಾಖೆ, ಲೀಡ್ ಬ್ಯಾಂಕ್ ಕಚೇರಿ, ನಬಾರ್ಡ್ ಕಚೇರಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಸಂಸ್ಥೆಗಳನ್ನು ಸಂಪರ್ಕಿಸಬಹುದು.


ಜೊತೆಗೆ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶ್ರೀ ಸಂಕಪ್ಪ ಶೆಟ್ಟಿ (9686685679) ಹಾಗೂ ಜಿಲ್ಲಾ ಯೋಜನಾ ಸಂಪರ್ಕ ಅಧಿಕಾರಿ ಪ್ರೇಮಾ ಡಿ.ಕಾಂಬ್ಳೆ (0824-2423602, 2423604) ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.



Ads on article

Advertise in articles 1

advertising articles 2

Advertise under the article