-->
ಕೊನೆಗೂ ದೊರಕಿತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು

ಕೊನೆಗೂ ದೊರಕಿತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು

ಮುಂಬೈ(ಮಹಾರಾಷ್ಟ್ರ): ಅಶ್ಲೀಲ ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಬಾಲಿವುಡ್​ ನಟಿ ಶಿಲ್ಪಾಶೆಟ್ಟಿ ಪತಿ ರಾಜ್​ ಕುಂದ್ರಾಗೆ ಮುಂಬೈ ಕೋರ್ಟ್‌ ಕೊನೆಗೂ ಇಂದು  ಜಾಮೀನು ಮಂಜೂರು ಮಾಡಿದೆ. ನಾಳೆಯೇ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. 

50 ಸಾವಿರ ರೂ. ಮೊತ್ತದ ಶ್ಯೂರಿಟಿ ಬಾಂಡ್​ ನೀಡಲು ಸೂಚನೆ ನೀಡಿರುವ ನ್ಯಾಯಾಲಯ ಇದೀಗ ಬೇಲ್​ ನೀಡಿದೆ. ಬಂಧನವಾಗಿ 2 ತಿಂಗಳ ಬಳಿಕ ಇದೀಗ ಬಿಡುಗಡೆಯಾದ ರಾಜ್​ ಕುಂದ್ರಾ ನಿರಾಳರಾಗಿದ್ದಾರೆ.

ಅಶ್ಲೀಲ ವೀಡಿಯೋ ತಯಾರಿಕೆ ಮಾಡಿ ಪ್ರಸಾರ ಮಾಡುತ್ತಿರುವ ಪ್ರಕರಣದಲ್ಲಿ ರಾಜ್​ ಕುಂದ್ರಾ ಅವರನ್ನು ಕಳೆದ ತಿಂಗಳು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದರು. ಮುಂಬೈ ಮ್ಯಾಜಿಸ್ಟ್ರೇಟ್​ ಕೋರ್ಟ್​ ಕುಂದ್ರಾಗೆ ಜಾಮೀನು ಮಂಜೂರು ಮಾಡಿದ್ದು, ನಾಳೆ ಬೆಳಗ್ಗೆ ಆರ್ಥರ್ ರೋಡ್ ಜೈಲಿನಿಂದ ಅವರು ಬಿಡುಗಡೆ ಆಗಲಿದ್ದಾರೆ. 

ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ರಾಜ್ ಕುಂದ್ರಾ ಅದನ್ನು ‘ಹಾಟ್​​ಶಾಟ್ಸ್​’ ಎಂಬ ಒಟಿಟಿ ಮೂಲಕ ಪ್ರಸಾರ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದ ಅವರನ್ನು ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

Ads on article

Advertise in articles 1

advertising articles 2

Advertise under the article