-->
ಕಡಬ: ಅಪ್ರಾಪ್ತೆಯ ಗರ್ಭಿಣಿಯನ್ನಾಗಿಸಿ, ಅಬಾರ್ಷನ್ ಮಾಡಿಸಿದ ಪೊಲೀಸ್ ಕಾನ್​ಸ್ಟೇಬಲ್ ಅರೆಸ್ಟ್

ಕಡಬ: ಅಪ್ರಾಪ್ತೆಯ ಗರ್ಭಿಣಿಯನ್ನಾಗಿಸಿ, ಅಬಾರ್ಷನ್ ಮಾಡಿಸಿದ ಪೊಲೀಸ್ ಕಾನ್​ಸ್ಟೇಬಲ್ ಅರೆಸ್ಟ್

ಕಡಬ: ಅತ್ಯಾಚಾರ ಸಂತ್ರಸ್ತೆಯ ಮೇಲೆ ಸಮನ್ಸ್ ನೀಡಲು ಮನೆಗೆ ಬರುತ್ತಿದ್ದ ಪೊಲೀಸ್​ ಕಾನ್​ಸ್ಟೇಬಲ್ ಅತ್ಯಾಚಾರ ಮಾಡಿರುವುದಲ್ಲದೆ ಆಕೆ ಗರ್ಭವತಿಯಾದ ಬಳಿಕ ಗರ್ಭಪಾತವನ್ನು ಮಾಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯ ಕಾನ್​ಸ್ಟೇಬಲ್ ಶಿವರಾಜ್ ಬಂಧಿತ ಆರೋಪಿ. 

ಎರಡು ವರ್ಷಗಳ ಹಿಂದೆ ಕಡಬದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಪ್ರಕರಣವು ಕಳೆದ ಆರು ತಿಂಗಳ ಹಿಂದೆಯಷ್ಟೇ ಮುಕ್ತಾಯಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವರಾಜ್ ದಾಖಲೆಗಳು, ಸಮನ್ಸ್ ನೀಡುವ ವಿಚಾರಕ್ಕೆ ಅಪ್ರಾಪ್ತೆಯ ಮನೆಗೆ ಬರುತ್ತಿದ್ದ. 

ಆಗ ಆತ ಅತ್ಯಾಚಾರ ಸಂತ್ರಸ್ತೆ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆಯೊಂದಿಗೆ ಸಲಿಗೆ ಬೆಳೆಸಿಕೊಂಡು ತಾನು ಮದುವೆಯಾಗುವೆನೆಂದು ದೈಹಿಕ ಸಂಪರ್ಕವನ್ನು ಮಾಡಿದ್ದ. 

ಇತ್ತೀಚೆಗೆ ಆಕೆಯ ದೈಹಿಕ ಬೆಳವಣಿಗೆಯಲ್ಲಿ ಆಗಿರುವ ಏರುಪೇರನ್ನು ಕಂಡು ಆಕೆಯ ಪೋಷಕರು ವಿಚಾರಿಸಿದಾಗ ಆಕೆ 5.50 ತಿಂಗಳ ಗರ್ಭಿಣಿಯಾಗಿರುವು ಬೆಳಕಿಗೆ ಬಂದಿದೆ.

ಬಾಲಕಿಯ ಪೋಷಕರು ಶಿವರಾಜ್ ನನ್ನು ಸಂಪರ್ಕಿಸಿ ಬಾಲಕಿ ಗರ್ಭಿಣಿಯಾಗಿರುವುದರ ಬಗ್ಗೆ ವಿಚಾರಿಸಿ ಮಗಳನ್ನು ಮದುವೆಯಾಗಬೇಕೆಂದು ಕೇಳಿಕೊಂಡಿದ್ದಾರೆ. ಆಗ ಆರೋಪಿ ಶಿವರಾಜ್ 'ತಾನು ಆಕೆಯನ್ನು ಮದುವೆಯಾಗುವುದಿಲ್ಲ, ಗರ್ಭಿಣಿ ಆಗಿದ್ದರೆ ಅಬಾರ್ಷನ್ ಮಾಡಿಸುತ್ತೇನೆ. ಅದಕ್ಕೆ ತಗಲುವ ಖರ್ಚು ಕೊಡುತ್ತೇನೆ' ಎಂದು ಹೇಳಿದ್ದ. ಈ ನಡುವೆ ಸೆ.18ರಂದು ಅಪ್ರಾಪ್ತೆ ಹಾಗೂ ಆಕೆಯ ತಾಯಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ವಾಪಸ್ ಮನೆಗೆ ಬಂದಿಲ್ಲ. ಆರೋಪಿನ ಶಿವರಾಜ್ ಅವರಿಬ್ಬರನ್ನು ಅಜ್ಞಾತ ಸ್ಥಳದಲ್ಲಿರಿಸಿದ್ದಾನೆ. ಪತ್ನಿ ತನ್ನ ಕರೆ ಸ್ವೀಕರಿಸಿ ಅಬಾರ್ಷನ್ ಆಗಿದೆ ಎಂದು ಹೇಳಿದ್ದು, ಆದರೆ ಎಲ್ಲಿ ಇದ್ದಾರೆಂದು   ಎಂದು ಇನ್ನೂ ತಿಳಿದಿಲ್ಲ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಆರೋಪಿ‌ ಶಿವರಾಜ್​ ಮೇಲೆ ಸಂತ್ರಸ್ತೆ ತಂದೆ ದೂರು ದಾಖಲಿಸಿರುವ ಪರಿಣಾಮ ಆತನನ್ನು ಕಡಬ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article