-->

ಮುಖ್ಯಮಂತ್ರಿ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ: ಹಿಂದೂ ಮಹಾಸಭಾದ ಮೂವರು ಮುಖಂಡರು ಪೊಲೀಸ್ ವಶಕ್ಕೆ

ಮುಖ್ಯಮಂತ್ರಿ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ: ಹಿಂದೂ ಮಹಾಸಭಾದ ಮೂವರು ಮುಖಂಡರು ಪೊಲೀಸ್ ವಶಕ್ಕೆ

ಮಂಗಳೂರು: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಬೆದರಿಕೆ ಒಡ್ಡಿದ್ದರೆಂಬ ಆರೋಪದ ಮೇಲೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಜೊತೆಗೆ ರಾಜೇಶ್ ಪವಿತ್ರನ್ ಹಾಗೂ ಪ್ರೇಮ್ ಪೊಳಲಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಖಾಸಗಿ ಹೊಟೇಲೊಂದರಲ್ಲಿ‌ ಮೈಸೂರಿನ ನಂಜನಗೂಡಿನಲ್ಲಿನ ದೇಗುಲವನ್ನು ಕೆಡವಿರುವ ಹಿನ್ನೆಲೆಯಲ್ಲಿ ನಡೆಸಿರುವ ಸುದ್ದಿಗೋಷ್ಠಿಯಲ್ಲಿ ಧರ್ಮೇಂದ್ರ ಅವರು, "ಗಾಂಧೀಜಿಯವರನ್ನು ಹತ್ಯೆ ಮಾಡಲು ಸಾಧ್ಯವಾಗುತ್ತದೆ ಎಂದ ಮೇಲೆ‌ ನಿಮ್ಮ ವಿಚಾರದಲ್ಲಿ ಸಾಧ್ಯವಿಲ್ಲ ಅಂತೀರಾ?" ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಹಿತ್ ಕುಮಾರ್ ಸುವರ್ಣ ಅವರು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು‌.

ದೂರು ದಾಖಲಾಗುವಂತೆ ಧರ್ಮೇಂದ್ರ ಅವರು ವೀಡಿಯೋ ಮಾಡಿ ಕ್ಷಮೆ ಯಾಚನೆ ಮಾಡಿದ್ದರು. ಇದೀಗ ಬರ್ಕೆ ಪೊಲೀಸ್ ಠಾಣೆಯ ಪೊಲೀಸರು ಮೂವರನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article